ನವದೆಹಲಿ: ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ಮಾರುತಿ ಸುಜುಕಿಯ ಜಿಮ್ನಿ 5-ಡೋರ್. ಇದರ ಬುಕಿಂಗ್ ಕೂಡ ಆರಂಭವಾಗಿದೆ. ಹರಿಯಾಣದ ಗುರುಗ್ರಾಮ್ ಉತ್ಪಾದನಾ ಘಟಕದಲ್ಲಿ ಹೊಸ ಜಿಮ್ನಿ 5-ಡೋರ್ ರೆಡಿಯಾಗುತ್ತಿದ್ದು, ಬರುವ ಮೇ ತಿಂಗಳ ಹೊತ್ತಿಗೆ ಭಾರತದ ಗ್ರಾಹಕರಿಗೆ ಸಿಗುವ ನಿರೀಕ್ಷೆ ಇದೆ.
ಮಾರುತಿ ಜಿಮ್ನಿ 5-ಡೋರ್, ಉದ್ದವಾದ ವೀಲ್‌ಬೇಸ್ ಹೊಂದಿರುವ ಎಸ್‌ಯುವಿಯಾಗಿದೆ. ಇದು 3-ಡೋರ್ ಜಿಮ್ನಿಯನ್ನು ಹೋಲುವಂತೆ ಇದೆ. ಆದರೆ ಎರಡು ಹೆಚ್ಚುವರಿ ಬಾಗಿಲುಗಳನ್ನು ನೀಡಲಾಗಿದೆ. ಇಷ್ಟೇ ಅಲ್ಲದೇ, 3,985 ಎಂಎಂ ಉದ್ದ ಮತ್ತು 2,590 ಎಂಎಂ ವೀಲ್‌ಬೇಸ್ ನೊಂದಿಗೆ ಜಿಮ್ನಿ 5-ಡೋರ್, ವೀಲ್‌ಬೇಸ್ 3-ಡೋರ್ ಜಿಮ್ನಿ ಮಾದರಿಗಿಂತ 340 ಎಂಎಂ ಉದ್ದವಾಗಿ ಮೂಡಿ ಬಂದಿದೆ.
1,645 ಎಂಎಂ ಅಗಲ ಮತ್ತು 1,720 ಎಂಎಂ ಎತ್ತರವನ್ನು ಕೂಡ ಇದು ಹೊಂದಿದೆ. ಇದು ಕ್ಲೀನ್ ಸರ್ಫೇಸಿಂಗ್, ವೃತ್ತಾಕಾರದ ಹೆಡ್‌ಲ್ಯಾಂಪ್‌ಗಳು, ಸ್ಲ್ಯಾಟೆಡ್ ಗ್ರಿಲ್, ಚಂಕ್ ಆಫ್-ರೋಡ್ ಟೈರ್‌ಗಳು ಮತ್ತು ಫ್ಲೇರ್ಡ್ ವೀಲ್ ಆರ್ಚ್‌ನಂತಹ ವಿನ್ಯಾಸದ ವೈಶಿಷ್ಟ್ಯಗಳನ್ನು ಪಡೆದಿದೆ.
ಹೊಸ ಮಾರುತಿ ಸುಜುಕಿ ಜಿಮ್ನಿ 5-ಡೋರ್, ಎಕ್ಪೋಸ್ಡ್ ಹಿಂಜ್‌ಗಳೊಂದಿಗೆ ಸಿಂಗಲ್ ಸೈಡ್ ತೆರೆಯುವ ಡೋರ್, ಬ್ಲ್ಯಾಕ್ ಕವರಿಂಗ್ ಡೋರ್-ಮೌಂಟೆಡ್ ಸ್ಪೇರ್ ಟೈರ್ ಮತ್ತು 3-ಡೋರ್ ಜಿಮ್ನಿಯಂತೆ ಬಂಪರ್-ಮೌಂಟೆಡ್ ಟೈಲ್ ಲ್ಯಾಂಪ್‌ಗಳನ್ನು ಹೊಂದಿದೆ. ಜಿಮ್ನಿ 5-ಡೋರ್ ಹಿಂಭಾಗದಲ್ಲಿ ಯಾವುದೇ ಪ್ರಮುಖ ಸ್ಟೈಲಿಂಗ್ ಬದಲಾವಣೆಗಳು ಆಗಿಲ್ಲ. 195/80 ಸೆಕ್ಷನ್ ಟೈರ್‌ಗಳೊಂದಿಗೆ 15-ಇಂಚಿನ ಅಲಾಯ್ ವೀಲ್ಸ್ ಅನ್ನು ಜಿಮ್ನಿ 5-ಡೋರ್ ಅನ್ನು ಇದು ಹೊಂದಿದೆ. ಜಿಮ್ನಿ 5-ಡೋರ್ ಒಳಭಾಗವು 3-ಡೋರ್ ಜಿಮ್ನಿ ಮಾದರಿಯಂತೆ ಇದೆ ಎನ್ನಲಾಗಿದೆ.