ಮಾರುತಿ ಸುಜುಕಿ ಭಾರತೀಯರ ಅಚ್ಚುಮೆಚ್ಚು. ಆದ್ರೆ ಡಿಸೆಂಬರ್ 2021 ಮತ್ತು ಜನವರಿ 2022 ರಲ್ಲಿ ಮಾರುತಿ ಸುಜುಕಿ ಮಾರಾಟದಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ಫೆಬ್ರವರಿ ತಿಂಗಳಿನಲ್ಲಿ ಮಾರಾಟ ಹೆಚ್ಚಿಸಲು ಕಂಪನಿ ಹೊಸ ಯೋಜನೆ ರೂಪಿಸಿದೆ. ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಭರ್ಜರಿ ಆಫರ್ ನೀಡ್ತಿದೆ. ಕಂಪನಿಯು ಫೆಬ್ರವರಿಯಲ್ಲಿ ತನ್ನ ಕಾರುಗಳ ಮೇಲೆ ದೊಡ್ಡ ಆಫರ್ ನೀಡ್ತಿದೆ.
ಕಂಪನಿಯು ಗ್ರಾಹಕರಿಗೆ ಎಲ್ಲಾ ಕಾರುಗಳ ಮೇಲೆ 36,000 ರೂಪಾಯಿವರೆಗೆ ರಿಯಾಯಿತಿ ನೀಡ್ತಿದೆ. ಆಲ್ಟೋ, ಎಸ್ ಪ್ರೆಸ್ಸೊ, ಸೆಲಿರಿಯೋ, ಸ್ವಿಪ್ಟ್, ವ್ಯಾಗನ್ ಆರ್ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ ಸಿಗ್ತಿದೆ. ಸುಮಾರು 20 ವರ್ಷಗಳಿಂದ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಆಲ್ಟೊ ಕಾರಿನ ಮೇಲೆ ಕಂಪನಿಯು ಒಟ್ಟು 36,000 ರೂಪಾಯಿವರೆಗೆ ರಿಯಾಯಿತಿ ನೀಡಿದೆ. ಆದ್ರೆ ಕಾರಿನ ಸಿಎನ್ಜಿ ರೂಪಾಂತರದ ಮೇಲೆ ಕಂಪನಿಯು ಯಾವುದೇ ರಿಯಾಯಿತಿ ನೀಡ್ತಿಲ್ಲ.
ಇನ್ನು ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಮೇಲೆ 36,000 ವರೆಗೆ ಗ್ರಾಹಕರು ಲಾಭ ಗಳಿಸಬಹುದು. ಮಾರುತಿ ಸುಜುಕಿ ವ್ಯಾಗನ್ ಆರ್ ಗೆ ಒಟ್ಟು 31,000 ರೂಪಾಯಿಗಳ ರಿಯಾಯಿತಿ ಸಿಗ್ತಿದೆ.