ಭಾರತೀಯರ ಅಚ್ಚುಮೆಚ್ಚಿನ ವಾಹನಗಳಲ್ಲಿ ಮಾರುತಿ ಸುಜುಕಿ ಕೂಡ ಒಂದು. ಕೋಟ್ಯಾಂತರ ಭಾರತೀಯರ ಮನಸ್ಸು ಕದಿಯುವಲ್ಲಿ ಕಂಪನಿ ಯಶಸ್ವಿಯಾಗಿದೆ. ಪೆಟ್ರೋಲ್, ಸಿಎನ್ ಜಿ ವಾಹನಗಳನ್ನು ನೀಡುವ ಕಂಪನಿ ಈಗ ಮತ್ತೊಂದು ಕ್ಷೇತ್ರಕ್ಕೆ ಲಗ್ಗೆಯಿಡ್ತಿದೆ.
ಕಂಪನಿ ಎಲೆಕ್ಟ್ರಿಕ್ ವಾಹನ ಪರಿಚಯಿಸಲು ಮುಂದಾಗಿದೆ. ವರದಿಗಳ ಪ್ರಕಾರ ಮಾರುತಿ ಸುಜುಕಿ ಕಂಪನಿಯ ಮೊದಲ ಮಧ್ಯಮ ಗಾತ್ರದ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಟೊಯೋಟಾ ಜೊತೆಗಿನ ಪಾಲುದಾರಿಕೆಯ ಅಡಿಯಲ್ಲಿ ತರಲಾಗ್ತಿದೆ. ಇದಕ್ಕೆ YY8 ಎಂಬ ಆರಂಭಿಕ ಹೆಸರಿಡಲಾಗಿದೆ.
ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಎಸ್ಯುವಿ ಆಕರ್ಷಕವಾಗಿರಲಿದೆ. ಇದ್ರ ಉದ್ದ ಸುಮಾರು 4.2 ಮೀಟರ್ ಆಗಿರಲಿದೆ. ಇದು ಹುಂಡೈ ಕ್ರೆಟಾಕ್ಕಿಂತ ದೊಡ್ಡದಾಗಿರಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ಇದು ಎಂಜಿಎಸ್ಇವಿ ಯೊಂದಿಗೆ ಸ್ಪರ್ಧೆ ನಡೆಸಲಿದೆ.
ಹೊಸ ಮಾರುತಿ ಸುಜುಕಿ ವೈವೈ8 ಬೆಲೆಯು 13-15 ಲಕ್ಷ ರೂಪಾಯಿವರೆಗೆ ಇರಲಿದೆ ಎಂದು ಊಹಿಸಲಾಗ್ತಿದೆ. ವೈವೈ8 ಅನ್ನು 27ಪಿಎಲ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗುತ್ತಿದೆ.
ಇದು ದ್ವಿಚಕ್ರ ಮತ್ತು 4-ಚಕ್ರ ಡ್ರೈವ್‌ನಲ್ಲಿ ಬರಲಿದೆ. 48 kW-R ಬ್ಯಾಟರಿ ಪ್ಯಾಕ್ ನೊಂದಿಗೆ ಬರುವ ವಾಹನ ಒಮ್ಮೆ ಚಾರ್ಜ್ ಮಾಡಿದ್ರೆ 400 ಕಿಮೀ ವರೆಗೆ ಚಲಿಸಲಿದೆ. ಇನ್ನೊಂದು ರೂಪಾಂತರವು 59 kW-R ಬ್ಯಾಟರಿ ಪ್ಯಾಕ್‌ನೊಂದಿಗೆ ಬರಲಿದೆ. ಒಂದೇ ಚಾರ್ಜ್‌ನಲ್ಲಿ 500 ಕಿಮೀ ವರೆಗೆ ಚಲಿಸಲಿದೆ ಎಂದು ಮೂಲಗಳು ಹೇಳಿವೆ.