alex Certify ಬಲೆನೂ ಆರ್‌ಎಸ್‌ ಕಾರುಗಳಿಗೆ ಈ ಭಾಗವನ್ನು ಉಚಿತವಾಗಿ ಬದಲಿಸಿಕೊಡುತ್ತಿದೆ ಮಾರುತಿ ಸುಜ಼ುಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಲೆನೂ ಆರ್‌ಎಸ್‌ ಕಾರುಗಳಿಗೆ ಈ ಭಾಗವನ್ನು ಉಚಿತವಾಗಿ ಬದಲಿಸಿಕೊಡುತ್ತಿದೆ ಮಾರುತಿ ಸುಜ಼ುಕಿ

ತಾಂತ್ರಿಕ ಲೋಪಗಳ ದೂರುಗಳು ಹೆಚ್ಚಾಗಿ ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ಬಲೆನೋ ಆರ್‌ಎಸ್‌ನ 7,213 ಘಟಕಗಳನ್ನು ಹಿಂಪಡೆಯುವುದಾಗಿ ಮಾರುತಿ ಸುಜ಼ುಕಿ ಇಂಡಿಯಾ ತಿಳಿಸಿದ್ದಾರೆ.

ಅಕ್ಟೋಬರ್‌ 27, 2016ರಿಂದ ನವೆಂಬರ್‌ 1, 2019ರ ನಡುವೆ ಉತ್ಪಾದನೆಯಾದ ಈ ಘಟಕಗಳಲ್ಲಿ ಬ್ರೇಕ್ ಹಾಕಲು ನೆರವಾಗುವ ವ್ಯಾಕ್ಯೂಮ್ ಪಂಪ್‌ನಲ್ಲಿ ಲೋಪಗಳು ಕಂಡು ಬಂದಿದ್ದವು.

“ವ್ಯಾಕ್ಯೂಮ್ ಪಂಪ್‌ನಲ್ಲಿ ಲೋಪವಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಇಂಥ ಸಂದರ್ಭದಲ್ಲಿ, ಸಮಸ್ಯೆ ಇರುವ ವಾಹನವು ಬ್ರೇಕ್ ಪೆಡಲ್ ಒತ್ತಲು ಇನ್ನಷ್ಟು ಹೆಚ್ಚಿನ ಶ್ರಮ ಬೇಡುತ್ತದೆ. ಲೋಪವಿರುವ ಭಾಗಗಳ ಉಚಿತ ಬದಲಾವಣೆಗಾಗಿ ಮಾರುತಿ ಸುಜ಼ುಕಿಯ ಅಧಿಕೃತ ಡೀಲರ್‌ಗಳಿಂದ ಗ್ರಾಹಕರಿಗೆ ಸಂದೇಶ ಬರಲಿದೆ,” ಎಂದು ಕಂಪನಿ ತಿಳಿಸಿದೆ.

2017ರ ಮಾರ್ಚ್‌ನಲ್ಲಿ ಬಿಡುಗಡೆಯಾದ ಬಲೆನೋ ಆರ್‌ಎಸ್‌ನ ಉತ್ಪಾದನೆಯನ್ನು ಜನವರಿ 2020ರಲ್ಲಿ ನಿಲ್ಲಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...