ದೇಶದ ಅತಿದೊಡ್ಡ ಆಟೋಮೊಬೈಲ್ ತಯಾರಕರಲ್ಲಿ ಒಂದಾಗಿರುವ ಮಾರುತಿ ಸುಜುಕಿ ತನ್ನ ಅರೆನಾ ಡೀಲರ್‌ಶಿಪ್‌ಗಳ ಕಾರುಗಳಲ್ಲಿ ಆಲ್ಟೊ ಕೆ10, ಎಸ್-ಪ್ರೆಸ್ಸೊ, ವ್ಯಾಗನ್ ಆರ್, ಸ್ವಿಫ್ಟ್ ಮತ್ತು ಡಿಜೈರ್‌ನಂತಹ ಮಾದರಿಗಳಲ್ಲಿ ಬೃಹತ್ ರಿಯಾಯಿತಿಗಳನ್ನು ನೀಡುತ್ತಿದೆ.
ಈ ರಿಯಾಯಿತಿ ಈ ವರ್ಷದ ಜನವರಿಯಲ್ಲಿ ಮಾತ್ರ ಇರಲಿದ್ದು, ನಗದು ರಿಯಾಯಿತಿಗಳು, ವಿನಿಮಯ ರಿಯಾಯಿತಿಗಳು ಮತ್ತು ಕಾರ್ಪೊರೇಟ್ ಪ್ರಯೋಜನಗಳನ್ನು ಒಳಗೊಂಡಿರುತ್ತದೆ. ಮಾರುತಿ ಸುಜುಕಿ ಕಾರುಗಳ ಮೇಲಿನ ರಿಯಾಯಿತಿಗಳ ಕುರಿತು ಸಂಪೂರ್ಣ ವಿವರಗಳು ಇಲ್ಲಿವೆ.
ಮಾರುತಿ ಸುಜುಕಿ ಆಲ್ಟೊ ಕೆ10
ಮಾರುತಿ ಸುಜುಕಿ ಆಲ್ಟೊ ಕೆ10 ತನ್ನ ಎಲ್ಲಾ ಪೆಟ್ರೋಲ್ ಮತ್ತು ಸಿಎನ್‌ಜಿ ರೂಪಾಂತರಗಳಲ್ಲಿ ರೂ. 47,000 ವರೆಗೆ ರಿಯಾಯಿತಿಯೊಂದಿಗೆ ಲಭ್ಯವಿದೆ. ಈ ರಿಯಾಯಿತಿಗಳು 25,000 ರೂ. ವರೆಗಿನ ನಗದು ಪ್ರಯೋಜನಗಳನ್ನು, 15,000 ರೂ. ವರೆಗಿನ ವಿನಿಮಯ ಬೋನಸ್ ಮತ್ತು 7,000 ರೂ. ವರೆಗಿನ ಕಾರ್ಪೊರೇಟ್ ರಿಯಾಯಿತಿಯನ್ನು ಒಳಗೊಂಡಿರುತ್ತದೆ.
ಮಾರುತಿ ಸುಜುಕಿ ಎಸ್ ಪ್ರೆಸ್ಸೊ
ಮಾರುತಿ ಸುಜುಕಿ S ಪ್ರೆಸ್ಸೊದ ಪೆಟ್ರೋಲ್ ರೂಪಾಂತರಗಳು ಪ್ರಸ್ತುತ 44,000 ರೂ. ವರೆಗಿನ ರಿಯಾಯಿತಿಗಳೊಂದಿಗೆ ಲಭ್ಯವಿದೆ. ಇದರಲ್ಲಿ 23,000 ರೂ. ವರೆಗಿನ ನಗದು ಪ್ರಯೋಜನ, 15,000 ರೂ. ವರೆಗಿನ ವಿನಿಮಯ ಬೋನಸ್ ಮತ್ತು ರೂ. 6,000 ವರೆಗಿನ ಕಾರ್ಪೊರೇಟ್ ರಿಯಾಯಿತಿಗಳು. ಪರ್ಯಾಯವಾಗಿ CNG ರೂಪಾಂತರವು 18,000 ರೂಪಾಯಿಗಳ ನಗದು ರಿಯಾಯಿತಿಯೊಂದಿಗೆ ಗರಿಷ್ಠ 39,000 ರೂ. ವರೆಗಿನ ರಿಯಾಯಿತಿಯೊಂದಿಗೆ ಲಭ್ಯವಿದೆ.
ಮಾರುತಿ ಸುಜುಕಿ ವ್ಯಾಗನ್ ಆರ್
ಮಾರುತಿ ಸುಜುಕಿ ವ್ಯಾಗನ್ ಆರ್ 41,000 ರೂ. ವರೆಗಿನ ರಿಯಾಯಿತಿಯೊಂದಿಗೆ ಲಭ್ಯವಿದೆ. ಈ ರಿಯಾಯಿತಿಗಳು 15,000 ರೂ. ವರೆಗಿನ ನಗದು ಲಾಭ, 20,000 ರೂ. ವರೆಗಿನ ವಿನಿಮಯ ಬೋನಸ್ ಮತ್ತು 6,000 ರೂ. ವರೆಗಿನ ಕಾರ್ಪೊರೇಟ್ ರಿಯಾಯಿತಿಗಳನ್ನು ಒಳಗೊಂಡಿವೆ. ಹೆಚ್ಚುವರಿಯಾಗಿ ಸಿಎನ್‌ಜಿ ರೂಪಾಂತರವು 36,000 ರೂ.ವರೆಗಿನ ರಿಯಾಯಿತಿಯೊಂದಿಗೆ ಲಭ್ಯವಿದೆ.
ಮಾರುತಿ ಸುಜುಕಿ ಸ್ವಿಫ್ಟ್
ಮಾರುತಿ ಸುಜುಕಿ ಸ್ವಿಫ್ಟ್ ಅನ್ನು 37,000 ರೂ. ವರೆಗಿನ ರಿಯಾಯಿತಿಗಳೊಂದಿಗೆ ನೀಡಲಾಗುತ್ತಿದೆ. ಇದು 10,000 ರೂ. ವರೆಗಿನ ನಗದು ಪ್ರಯೋಜನಗಳು, 20,000 ರೂ. ವರೆಗಿನ ವಿನಿಮಯ ಬೋನಸ್ ಮತ್ತು 7,000 ರೂ. ವರೆಗೆ ಕಾರ್ಪೊರೇಟ್ ರಿಯಾಯಿತಿಯನ್ನು ಒಳಗೊಂಡಿರುತ್ತದೆ. ಸಿ ಎನ್ ಜಿ ರೂಪಾಂತರಗಳಿಗೆ 15,000 ರೂಪಾಯಿಗಳ ವಿನಿಮಯ ಬೋನಸ್ ಮತ್ತು 7,000 ರೂಪಾಯಿಗಳ ಕಾರ್ಪೊರೇಟ್ ಬೋನಸ್ ಇದೆ. ಪ್ರಸ್ತುತ ಯಾವುದೇ ನಗದು ರಿಯಾಯಿತಿ ಲಭ್ಯವಿಲ್ಲ.
ಮಾರುತಿ ಸುಜುಕಿ ಡಿಜೈರ್
ಮಾರುತಿ ಸುಜುಕಿ ಡಿಜೈರ್ ಸ್ವಿಫ್ಟ್‌ನ ಕಾಂಪ್ಯಾಕ್ಟ್ ಸೆಡಾನ್ ಪ್ರತಿರೂಪವಾಗಿದೆ. ಕಾಂಪ್ಯಾಕ್ಟ್ ಸೆಡಾನ್ 17,000 ರೂ. ವರೆಗಿನ ರಿಯಾಯಿತಿಗಳೊಂದಿಗೆ ಲಭ್ಯವಿದೆ. ಇದರಲ್ಲಿ 10,000 ರೂ. ವಿನಿಮಯ ಬೋನಸ್ ಮತ್ತು ಯಾವುದೇ ನಗದು ರಿಯಾಯಿತಿಯಿಲ್ಲದೆ 7,000 ರೂ. ಕಾರ್ಪೊರೇಟ್ ಬೋನಸ್ ಇರಲಿದೆ. ಮಾರುತಿ ಸುಜುಕಿ ಡಿಜೈರ್‌ನ ಸಿ ಎನ್ ಜಿ ರೂಪಾಂತರದಲ್ಲಿ ಯಾವುದೇ ಕೊಡುಗೆಗಳು ಲಭ್ಯವಿಲ್ಲ.