alex Certify ಮಾರುತಿ ಸುಜ಼ುಕಿ ಮಾಲೀಕರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರುತಿ ಸುಜ಼ುಕಿ ಮಾಲೀಕರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ತನ್ನ ಬ್ರಾಂಡ್‌ನ ಕೆಲ ಕಾರುಗಳ ಇಂಜಿನ್‌ಗಳಲ್ಲಿ ಅಸಹಜವಾದ ಕಂಪನಗಳ ಅನುಭವವಾಗುತ್ತಿರುವ ದೂರುಗಳನ್ನು ಗ್ರಾಹಕರು ಕೊಡುತ್ತಿರುವ ಹಿನ್ನೆಲೆಯಲ್ಲಿ ಸರ್ವೀಸ್ ಅಭಿಯಾನವೊಂದಕ್ಕೆ ಮಾರುತಿ ಸುಜ಼ುಕಿ ಮುಂದಾಗಿದೆ.

ಕಂಪನಿಯ ಎರ್ಟಿಗಾ, ಸ್ವಿಫ್ಟ್‌, ಡಿಜ಼ೈರ್‌, ಸಿಯಾಜ಼್‌, ಎಕ್ಸ್‌ಎಲ್‌6 ಮತ್ತು ಇಗ್ನಿಸ್‌ ಕಾರುಗಳ ಇಂಜಿನ್‌ಗಳಲ್ಲಿ ಇಂಜಿನ್‌ ಅಳವಡಿಕೆಯಲ್ಲಿ ಲೋಪವುಂಟಾದ ಕಾರಣ ಹೀಗೆ ಕಂಪನಗಳ ಸೃಷ್ಟಿಯಾಗುತ್ತಿದೆ ಎಂದು ಅನೇಕ ಮಾಲೀಕರು ದೂರು ನೀಡಿದ್ದರು.

ಈ ಕಾರಣದಿಂದಾಗಿ ಸರ್ವೀಸ್ ಅಭಿಯಾನವೊಂದಕ್ಕೆ ಮುಂದಾಗುತ್ತಿರುವ ಕಂಪನಿ, ದೋಪೂರಿತ ಇಂಜಿನ್‌ಗಳನ್ನು ಯಾವುದೇ ಶುಲ್ಕ ಪಡೆಯದೇ ಬದಲಿಸಿಕೊಡಲು ಮುಂದಾಗಿದೆ.

ಆರೋಗ್ಯಕರ ಕೂದಲು ಬಯಸುವವರು ಮಾಡಬೇಡಿ ಈ ತಪ್ಪು

ಇಂಜಿನ್‌ ಅಳವಡಿಕೆಯ ಬಲಭಾಗದಲ್ಲಿ 11610M72R00 ಸಂಖ್ಯೆಯ ಭಾಗವೊಂದರಲ್ಲಿ ಅಧಿಕವಾದ ಕಂಪನಗಳ ಅನುಭವವಾಗುತ್ತಿರ ವರದಿಗಳು ಅಲ್ಲಲ್ಲಿ ವರದಿಯಾಗಿವೆ. ಕೆಳಕಂಡ ವಾಹನ ಗುರುತು ಸಂಖ್ಯೆಗಳಿರುವ ಕಾರುಗಳಲ್ಲಿ ಕಂಡು ಬರುವ ಇಂಥ ದೋಷವನ್ನು ಪರಿಹರಿಸುವುದಾಗಿ ಮಾರುತಿ ಸುಜ಼ುಕಿ ಹೇಳಿಕೊಂಡಿದೆ:

ಡಿಜ಼ೈರ್‌ – 11610M72R00

ಸ್ವಿಫ್ಟ್‌ – MBHCZCB3SMG838412

ಎರ್ಟಿಗಾ – MA3BNC32SMG361698

ಇಗ್ನಿಸ್ – MA3NFG81SMG319333

ಎಕ್ಸ್‌ಎಲ್‌6 – MA3CNC32SMG261516

ಸಿಯಾಜ಼್‌ – MA3CNC32SMG261516

ಮೇಲ್ಕಂಡ ಸಮಸ್ಯೆ ಇರುವ, ಈ ಕಾರುಗಳನ್ನು ಮಾತ್ರವೇ ಸರ್ವೀಸ್ ಅಭಿಯಾನದಲ್ಲಿ ನೋಡಲಾಗುವುದು. ಇದಕ್ಕಾಗಿ ಕಾರುಗಳನ್ನು ಜುಲೈ 22, 2021ರ ಒಳಗೆ ಖರೀದಿ ಮಾಡಿದ್ದಾಗಿರಬೇಕು.

ಮೋಟರ್‌ ಜನರೇಟರ್‌ ಘಟಕಗಳಲ್ಲಿ ದೋಷವಿರುವ ಕಾರಣ ಸೆಪ್ಟೆಂಬರ್‌ 2021ರಲ್ಲಿ ಮಾರುತಿ ಸುಜ಼ುಕಿ 1.81 ಲಕ್ಷ ಕಾರುಗಳನ್ನು ಹಿಂದಕ್ಕೆ ಪಡೆದುಕೊಂಡಿತ್ತು. ಮೇ 4, 2018ರಿಂದ ಅಕ್ಟೋಬರ್‌ 27, 2020ರ ನಡುವೆ ಉತ್ಪಾದಿಸಿದ ಕಾರುಗಳು ಇವಾಗಿದ್ದವು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...