
ದೇಶದ ಅತಿದೊಡ್ಡ ಕಾರು ತಯಾರಕರೆನಿಸಿಕೊಂಡ ಮಾರುತಿ ಸುಜುಕಿ ಇಂಡಿಯಾವು ಹೆಚ್ಚುತ್ತಿರುವ ವೆಚ್ಚಗಳಿಂದಾಗಿ ಕಾರುಗಳ ಬೆಲೆ ಏರಿಕೆ ಮಾಡುವುದಾಗಿ ಘೋಷಿಸಿದೆ.
ಕಾರಿನಲ್ಲಿ ಬಳಸುವ ಉಪಕರಣ, ಸಾಮಗ್ರಿಗಳ ವೆಚ್ಚ ಹೆಚ್ಚಳದಿಂದಾಗಿ ಋಣಾತ್ಮಕವಾಗಿ ಪರಿಣಾಮ ಬೀರುತ್ತಿದೆ. ಈ ಹಿಂದೆ, ಟೊಯೊಟಾ, ಮರ್ಸಿಡಿಸ್ ಮತ್ತು ಬಿಎಂಡಬ್ಲ್ಯು ನಂತಹ ಬ್ರ್ಯಾಂಡ್‌ಗಳು ಸಹ ಇದೇ ಕಾರಣಗಳನ್ನು ಉಲ್ಲೇಖಿಸಿ ತಮ್ಮ ಉತ್ಪನ್ನಗಳ ಬೆಲೆ ಹೆಚ್ಚಿಸಿವೆ.
ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ಎತ್ತಿನ ಗಾಡಿ ಏರಿ ಬಂದಿದ್ದ ವಾಜಪೇಯಿ; ಹಳೆ ವಿಡಿಯೋ ಶೇರ್ ಮಾಡಿ ಮೋದಿ ಸರ್ಕಾರವನ್ನು ಗೇಲಿ ಮಾಡಿದ ಕಾಂಗ್ರೆಸ್ ನಾಯಕ
ಹೆಚ್ಚುವರಿ ವೆಚ್ಚದ ಹೊರೆಯನ್ನು ಗ್ರಾಹಕರಿಗೆ ಮೇಲೆ ಹೊರಿಸುವುದು ಕಂಪನಿಗೆ ಅನಿವಾರ್ಯ. ಏಪ್ರಿಲ್‌ನಲ್ಲಿ ಬೆಲೆಗಳನ್ನು ಹೆಚ್ಚಿಸಲು ಯೋಜಿಸಿದೆ ಮತ್ತು ವಿವಿಧ ಮಾದರಿಗಳಿಗೆ ಹೆಚ್ಚಳವು ಬದಲಾಗುತ್ತದೆ ಎಂದು ಮಾರುತಿ ಸುಜುಕಿ ಹೇಳಿಕೊಂಡಿದೆ.
ಆದರೆ, ಸದ್ಯ ಪ್ರಸ್ತಾವಿತ ಬೆಲೆ ಏರಿಕೆಯ ಪ್ರಮಾಣವನ್ನು ಕಂಪನಿಯು ಬಹಿರಂಗಪಡಿಸಿಲ್ಲ. ಈಗಾಗಲೇ ಜನವರಿ 2021 ರಿಂದ ಮಾರ್ಚ್ 2022 ರವರೆಗೆ ವಾಹನ ಬೆಲೆಗಳನ್ನು ಸುಮಾರು 8.8 ಪ್ರತಿಶತದಷ್ಟು ಹೆಚ್ಚಿಸಿದೆ.
ಕಂಪನಿಯು ಆಲ್ಟೊದಿಂದ ಎಸ್-ಕ್ರಾಸ್ ವರೆಗೆ ಹಲವು ಮಾದರಿಗಳನ್ನು ಮಾರಾಟ ಮಾಡುತ್ತದೆ. ಉಕ್ಕು ಮತ್ತು ಅಲ್ಯೂಮಿನಿಯಂ ಮತ್ತು ಪಲ್ಲಾಡಿಯಮ್‌ನಂತಹ ಲೋಹಗಳ ಬೆಲೆ ಏರಿಕೆಯಾಗಿದೆ. ಇದು ಬೆಲೆಗಳನ್ನು ಹೆಚ್ಚಿಸುವಂತೆ ಮಾಡಿದೆ.