ಆಕಾಶದಲ್ಲಿ ಆಗುವ ಎಲ್ಲ ಬದಲಾವಣೆ ನಮ್ಮ ರಾಶಿ ಮೇಲೆ ಪರಿಣಾಮ ಬೀರುತ್ತದೆ. ನವೆಂಬರ್ 13 ರಂದು ಮಂಗಳ ಗ್ರಹ ರಾಶಿ ಬದಲಾಯಿಸಲಿದೆ. ಮಂಗಳ ಗ್ರಹ, ನವೆಂಬರ್ 13 ರಂದು ರಾತ್ರಿ 7 ಗಂಟೆ 40 ನಿಮಿಷಕ್ಕೆ ವೃಷಭ ರಾಶಿ ಪ್ರವೇಶಿಸಲಿದೆ. ಮಂಗಳನ ರಾಶಿ ಬದಲಾವಣೆ ಅನೇಕ ರಾಶಿಗಳ ಮೇಲಾಗಲಿದೆ. ಕೆಲ ರಾಶಿಗಳ ಜನರಿಗೆ ಇದ್ರಿಂದ ಸಾಕಷ್ಟು ತೊಂದರೆಯಾಗಲಿದೆ.
ಮೇಷ ರಾಶಿ : ಮಂಗಳ ಗ್ರಹದ ರಾಶಿ ಬದಲಾವಣೆಯಿಂದ ಮೇಷ ರಾಶಿಗೆ ಅಶುಭ ಫಲ ಸಿಗಲಿದೆ. ಈ ರಾಶಿಯ ಜನರ ಜೀವನದಲ್ಲಿ ಅನೇಕ ತೊಂದರೆ ಉಂಟಾಗಬಹುದು. ಕೆಟ್ಟ ಹಣಕಾಸಿನ ಪರಿಸ್ಥಿತಿ ಎದುರಿಸಬೇಕಾಗಬಹುದು. ಹೂಡಿಕೆ ಮಾಡುವಾಗ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ದಾಂಪತ್ಯ ಜೀವನದಲ್ಲಿ ಹಲವು ಸಮಸ್ಯೆ ಎದುರಾಗುವ ಸಾಧ್ಯತೆಯಿದೆ.
ಮಿಥುನ ರಾಶಿ : ಮಂಗಳನ ರಾಶಿ ಬದಲಾವಣೆ ಮಿಥುನ ರಾಶಿಯ ಮೇಲೂ ಕೆಟ್ಟ ಪರಿಣಾಮ ಬೀರಲಿದೆ. ದೈಹಿಕ, ಮಾನಸಿಕ ಮತ್ತು ಆರ್ಥಿಕ ಸಮಸ್ಯೆ ಎದುರಾಗಲಿದೆ. ಅನಗತ್ಯ ವೆಚ್ಚ ತಪ್ಪಿಸುವುದು ಒಳ್ಳೆಯದು. ದೂರದ ಪ್ರಯಾಣ ಮಾಡಬೇಡಿ.
ತುಲಾ ರಾಶಿ : ಮಂಗಳ ಗ್ರಹದ ಸಂಚಾರವು ತುಲಾ ರಾಶಿಯವರ ಜೀವನದಲ್ಲೂ ಸಾಕಷ್ಟು ಬದಲಾವಣೆ ತರಲಿದೆ. ಕೆಲಸದಲ್ಲಿ ಹೆಚ್ಚು ಶ್ರಮ ಅಗತ್ಯವಿರುತ್ತದೆ. ಮಾನಸಿಕ ಒತ್ತಡ ಹೆಚ್ಚಾಗಬಹುದು. ಆರ್ಥಿಕ ಪರಿಸ್ಥಿತಿ ಹದಗೆಡುವು ಸಾಧ್ಯತೆಯಿದೆ. ಹಾಗಾಗಿ ಕಚೇರಿಯಲ್ಲಿ ಕೆಲಸದ ವಿಷ್ಯ ಬಿಟ್ಟು ಬೇರೆ ಯಾವುದೇ ವಿಷ್ಯದ ಬಗ್ಗೆ ಮಾತನಾಡಬೇಡಿ.
ಮಕರ ರಾಶಿ : ಮಕರ ರಾಶಿಯವರು ಕೂಡ ಸಮಸ್ಯೆ ಎದುರಿಸಲಿದ್ದಾರೆ. ಹೂಡಿಕೆ ಹಣ ಕೈಗೆ ಸಿಗದೆ ಇರಬಹುದು. ಹಾಗಾಗಿ ಆಲೋಚನೆ ಮಾಡಿ ಹೂಡಿಕೆ ಮಾಡುವುದು ಒಳ್ಳೆಯದು. ವೈವಾಹಿಕ ಜೀವನದಲ್ಲಿ ಕೆಲವು ಏರಿಳಿತ ಕಂಡು ಬರುತ್ತದೆ. ಎಚ್ಚರಿಕೆಯಿಂದ ವ್ಯವಹರಿಸುವುದು ಸೂಕ್ತ.