ಜ್ಯೋತಿಷ್ಯದ ಪ್ರಕಾರ ಮಂಗಳ ಗ್ರಹಕ್ಕೆ ಮಹತ್ವದ ಸ್ಥಾನವಿದೆ. ಏಕೆಂದರೆ ಇದು ವಿವಾಹ ವಿಚಾರಕ್ಕೆ ಬಹಳ ಪ್ರಭಾವ ಬೀರುತ್ತದೆ. ಈ ಗ್ರಹದ ಸ್ಥಿತಿಗತಿಗಳು ಸರಿಯಾಗಿ ಇಲ್ಲದಿದ್ದರೆ ವಿವಾಹಕ್ಕೆ ಸಂಬಂಧಿಸಿದಂತೆ ಅನೇಕ ತೊಡಕುಗಳು ಎದುರಾಗುತ್ತವೆ. ಯಾರ ಜಾತಕದಲ್ಲಿ ಈ ಗ್ರಹದ ದೋಷವಿರುತ್ತದೆಯೋ ಅಂತವರ ವಿವಾಹ ಕೂಡ ಮಂಗಳ ಗ್ರಹದ ದೋಷವಿರುವ ಜಾತಕಕ್ಕೆ ಹೊಂದುತ್ತದೆ. ಇದಲ್ಲದೇ ಗ್ರಹಗಳ ಸೇನಾಧಿಪತಿಯಾಗಿರುವ ಮಂಗಳಗ್ರಹ ಶಕ್ತಿ ಮತ್ತು ಸಾಹಸದ ಪ್ರತೀಕವಾಗಿದೆ. ಇದು ಇನ್ನೂ ಅನೇಕ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ.
ಮಂಗಳ ಗ್ರಹ ಡಿಸೆಂಬರ್ 5ರ ತನಕ ತುಲಾ ರಾಶಿಯಲ್ಲಿ ಇರುತ್ತಾನೆ. ಅಕ್ಟೋಬರ್ 22ಕ್ಕೆ ಮಂಗಳ ತುಲಾ ರಾಶಿಗೆ ಬಂದಿದ್ದಾನೆ. ತುಲಾ ರಾಶಿ ಮದುವೆ ಮತ್ತು ಪ್ರೀತಿ, ಸಂಬಂಧಗಳ ಪ್ರತೀಕವಾದ್ದರಿಂದ ಈ ರಾಶಿಗೆ ಮಂಗಳ ಬಂದಿರುವುದು ಕೆಲವು ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರಬಹುದು. ಈ ಕೆಳಗಿನ ರಾಶಿಗಳ ಜನರಿಗೆ ಡಿಸೆಂಬರ್ 5 ರ ತನಕ ಅವರ ವೈವಾಹಿಕ ಮತ್ತು ಪ್ರೀತಿಯ ವಿಷಯದಲ್ಲಿ ತೊಂದರೆಯಾಗಬಹುದು.
ವೃಷಭ : ವೃಷಭ ರಾಶಿಯವರು ಡಿಸೆಂಬರ್ 5ರ ತನಕ ಸಂಬಂಧಗಳ ವಿಷಯದಲ್ಲಿ ಸಮಾಧಾನವಾಗಿರಿ. ಯಾರನ್ನೂ ಕಣ್ಣುಮುಚ್ಚಿ ನಂಬಬೇಡಿ. ಈ ಸಮಯದಲ್ಲಿ ನಿಮ್ಮ ಪ್ರೇಮ ಸಂಬಂಧ ಏನಾದರೂ ಮುರಿದು ಬಿದ್ದರೆ ಅದು ಕೂಡ ನಿಮ್ಮ ಒಳಿತಿಗಾಗಿಯೇ ಆಗಿರುತ್ತದೆ.
ಕನ್ಯಾ : ಈ ರಾಶಿಯವರು ಡಿಸೆಂಬರ್ 5ರ ತನಕ ಸಂಗಾತಿಯ ಜೊತೆ ಸಮಾಧಾನದಿಂದ ಮಾತನಾಡಿ. ಏಕೆಂದರೆ ಈ ಸಮಯದಲ್ಲಿ ಸಣ್ಣ ಸಣ್ಣ ಮಾತುಗಳು ಕೂಡ ದೊಡ್ಡ ಸಮಸ್ಯೆಯಾಗಬಹುದು. ಸ್ವಲ್ಪ ದಿನ ವಾದ-ವಿವಾದಗಳಿಂದ ದೂರ ಇರುವುದು ಉತ್ತಮ.
ವೃಶ್ಚಿಕ : ತುಲಾ ರಾಶಿಯ ಮಂಗಳವು ವೃಶ್ಚಿಕ ರಾಶಿಯ ಜನರಿಗೆ ನೆಗೆಟಿವಿಟಿ ತರುತ್ತದೆ. ಸಂಗಾತಿಯೊಂದಿಗೆ ಜಗಳವಾಗಬಹುದು, ಪತ್ಯೇಕವಾಗಬಹುದು. ಹಾಗಾಗಿ ಈ ರಾಶಿಯವರು ಹುಷಾರಾಗಿರಿ.
ಕುಂಭ : ಕುಂಭ ರಾಶಿಯ ಜನರು ಯಾತ್ರೆಗೆ ಹೋಗುತ್ತಾರೆ. ಅಣ್ಣ, ತಂಗಿಯರ ಸಂಬಂಧ ಹೆಚ್ಚು ಉತ್ತಮವಾಗುತ್ತದೆ. ಈ ಸಮಯದಲ್ಲಿ ಸಂಗಾತಿ ಸಿಟ್ಟಿನಲ್ಲಿ ಇರಬಹುದು. ಹಾಗಾಗಿ ಸಂಭಾಳಿಸಿಕೊಂಡು ಹೋಗಬೇಕು.
ಮೀನ : ಮೀನ ರಾಶಿಯವರ ವೈವಾಹಿಕ ಜೀವನ ಮತ್ತು ಪ್ರೀತಿಯ ಸಂಬಂಧಗಳಿಗೆ ಈ ಸಮಯ ಒಳ್ಳೆಯದಲ್ಲ. ಸಂಗಾತಿಯೊಂದಿಗೆ ವಿವಾದ ಉಂಟಾಗಬಹುದು ಮತ್ತು ಪ್ರೀತಿಯಲ್ಲಿ ದೊಡ್ಡ ಬದಲಾವಣೆಯಾಗಬಹುದು.