alex Certify ವಿವಾಹಿತ ಪುರುಷರ ಜೊತೆ ಮಾತ್ರ ಸಂಬಂಧ ಬೆಳೆಸ್ತಾಳೆ ಈ ಮಹಿಳೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾಹಿತ ಪುರುಷರ ಜೊತೆ ಮಾತ್ರ ಸಂಬಂಧ ಬೆಳೆಸ್ತಾಳೆ ಈ ಮಹಿಳೆ…!

ನಂಬಿಕೆ, ವಿಶ್ವಾಸ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಆದ್ರೆ ದಾಂಪತ್ಯದಲ್ಲಿ ದ್ರೋಹವಾದ್ರೆ ಅದನ್ನು ಸಹಿಸುವುದು ಕಷ್ಟ. ಕೆಲವರು ಹೊಂದಿಕೊಂಡು ಜೀವನ ನಡೆಸುತ್ತಾರೆ. ಆದ್ರೆ ಕೆಲವರು ಈ ಸಂಬಂಧದಿಂದ ಹೊರ ಬರುತ್ತಾರೆ. ಮೋಸ ಮಾಡಿದ ಪತಿಗೆ ಬುದ್ದಿ ಕಲಿಸಲು ಮಹಿಳೆಯೊಬ್ಬಳು ವಿಚಿತ್ರ ಮಾರ್ಗ ಹಿಡಿದಿದ್ದಾಳೆ. ಪೋರ್ಟಲ್ ಒಂದರಲ್ಲಿ ಮಹಿಳೆ ಈ ವಿಷ್ಯವನ್ನು ಹೇಳಿದ್ದಾಳೆ.

ಮಹಿಳೆ ಪತಿ ಬಹಳ ಒಳ್ಳೆಯವನಾಗಿದ್ದನಂತೆ. ಹೆಚ್ಚು ಕಾಳಜಿ ವಹಿಸುತ್ತಿದ್ದನಂತೆ. ಆದ್ರೆ ಪತಿ ಮೋಸ ಮಾಡ್ತಾನೆಂದು ಆಕೆ ಎಂದೂ ಭಾವಿಸಿರಲಿಲ್ಲವಂತೆ. ಪಕ್ಕದ ಮನೆ ಮಹಿಳೆ ಜೊತೆ ಸಂಬಂಧ ಬೆಳೆಸುವಾಗ ಪತಿ ಸಿಕ್ಕಿಬಿದ್ದಿದ್ದನಂತೆ. ಸಂಬಂಧ ಉಳಿಸಿಕೊಳ್ಳಬೇಕೆಂಬ ಕಾರಣಕ್ಕೆ 18 ವರ್ಷ ಪತಿ ಜೊತೆ ಇದ್ದಳಂತೆ. ನಂತ್ರ ಆತನಿಂದ ದೂರವಾದ ಮಹಿಳೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾಳೆ.

ಪುರುಷರ ಜೊತೆ ಡೇಟಿಂಗ್ ಶುರು ಮಾಡಿದ್ದ ಮಹಿಳೆ, ಪ್ರೀತಿಯ ಸಂಬಂಧ ಬೆಳೆಸದಿರಲು ನಿರ್ಧರಿಸಿದ್ದಾಳೆ. ಆಕೆಗೆ ವಿವಾಹಿತರು ಮಾತ್ರ ಇರುವ ವೆಬ್ಸೈಟ್ ಸಿಕ್ಕಿದೆಯಂತೆ. ಅದ್ರಲ್ಲಿ ವಿವಾಹಿತರು ಮಾತ್ರ ಪರಸ್ಪರ ಡೇಟಿಂಗ್ ಮಾಡ್ತಾರಂತೆ. ಈ ವೆಬ್ಸೈಟ್ ಗೆ ತನ್ನ ಡೇಟಾ ಹಾಕಿದ ಮಹಿಳೆ ಈಗ ಇಬ್ಬರು ವಿವಾಹಿತರ ಜೊತೆ ಸಂಬಂಧ ಹೊಂದಿದ್ದಾಳೆ. ಆದ್ರೆ ಯಾವುದನ್ನೂ ಗಂಭೀರವಾಗಿ ಪರಿಗಣಿಸಿಲ್ಲವೆಂದು ಆಕೆ ಹೇಳಿದ್ದಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...