ವಿಜಯವಾಡ: ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ 30 ವರ್ಷದ ಮಹಿಳೆ ಅಪ್ರಾಪ್ತ ಬಾಲಕನೊಂದಿಗೆ ಓಡಿಹೋಗಿದ್ದಾಳೆ. ವಿವಾಹಿತೆ ಅಪ್ರಾಪ್ತ ಬಾಲಕನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾರೆಂದು ಆರೋಪಿಸಲಾಗಿದೆ.
ಕೃಷ್ಣಾ ಜಿಲ್ಲೆಯ ಗುಡಿವಾಡ ನಿವಾಸಿಯಾದ ಮಹಿಳೆ 15 ವರ್ಷದ ಬಾಲಕನೊಂದಿಗೆ ಅನ್ಯೋನ್ಯ ಸಂಬಂಧ ಬೆಳೆಸಿದ್ದಳು. ಆಕೆ ಹುಡುಗನೊಂದಿಗೆ ಓಡಿಹೋಗಿದ್ದು, ಅವನೊಂದಿಗೆ ಇರಲು ಮತ್ತು ಲೈಂಗಿಕ ಸಂಬಂಧವನ್ನು ಮುಂದುವರಿಸಲು ಉದ್ದೇಶಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಹುಡುಗ ಮತ್ತು ಮಹಿಳೆ ತೆಲಂಗಾಣ ರಾಜಧಾನಿ ಹೈದರಾಬಾದ್ ನ ಬಾಲಾನಗರದಲ್ಲಿ ಬಾಡಿಗೆ ಮನೆಯಲ್ಲಿದ್ದಾರೆ. ಪೊಲೀಸರ ಪ್ರಕಾರ, 8 ನೇ ತರಗತಿಯಲ್ಲಿ ಓದುತ್ತಿರುವ ಹುಡುಗ ತನ್ನ ಸ್ನೇಹಿತರನ್ನು ಭೇಟಿಯಾಗುವುದಾಗಿ ಪೋಷಕರಿಗೆ ಹೇಳಿ ಮನೆಯಿಂದ ಹೊರಟು ತಡರಾತ್ರಿಯವರೆಗೆ ಹಿಂತಿರುಗಲಿಲ್ಲ. ಪೋಷಕರು ಆತಂಕಗೊಂಡು ಆತನಿಗಾಗಿ ಹುಡುಕಾಡಿದ್ದಾರೆ. ಆತನೊಂದಿಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿರುವ ಮಹಿಳೆಯೂ ಕಾಣೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಮಹಿಳೆಯೇ ಬಾಲಕನನ್ನು ಅಪಹರಿಸಿದ್ದಾರೆ ಎಂದು ಪೋಷಕರು ಶಂಕಿಸಿ ದೂರು ದಾಖಲಿಸಿದ್ದಾರೆ. ದೂರಿನ ನಂತರ ಪೊಲೀಸರು ಹೈದರಾಬಾದ್ ನಲ್ಲಿರುವ ಹುಡುಗ ಮತ್ತು ಮಹಿಳೆಯ ಪತ್ತೆಗೆ ತಂಡವನ್ನು ರಚಿಸಿದರು.
ತನಿಖೆಯ ಸಂದರ್ಭದಲ್ಲಿ, ಮಹಿಳೆಯು ಹುಡುಗನತ್ತ ಲೈಂಗಿಕವಾಗಿ ಆಕರ್ಷಿತಳಾಗಿದ್ದಳು. ಅವಳು ಅವನೊಂದಿಗೆ ಓಡಿಹೋಗುವ ಮೊದಲು ತನ್ನ ಮನೆಯಲ್ಲಿಯೇ ಹುಡುಗನೊಂದಿಗೆ ಲೈಂಗಿಕ ಸಂಬಂಧ ಇಟ್ಟುಕೊಂಡಿದ್ದಳು ಎಂದು ಪೊಲೀಸರು ತಿಳಿದುಕೊಂಡಿದ್ದಾರೆ.