
ಬೆಂಗಳೂರು: ಮದುವೆ ಮನೆಯಲ್ಲಿ ಕಣ್ಣಾಮುಚ್ಚಾಲೆ ಆಡುವ ನೆಪದಲ್ಲಿ ಉದ್ಯಮಿ ಮಗನಿಂದ ಚಿನ್ನಾಭರಣ ದೋಚಿದ ಘಟನೆ ನಡೆದಿದೆ.
ಬೆಂಗಳೂರಿನ ಮಾಗಡಿ ರಸ್ತೆಯ ಉದ್ಯಮಿ ರಾಘವೇಂದ್ರ ಅವರು ಪತ್ನಿ ಹಾಗೂ 6 ವರ್ಷದ ಪುತ್ರನೊಂದಿಗೆ ಸಂಬಂಧಿಕರ ಮದುವೆಗೆ ಹೋಗಿದ್ದಾರೆ. ಮಾಗಡಿ ರಸ್ತೆಯ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯುವ ವೇಳೆ ರಾಘವೇಂದ್ರ ಅವರ ಮಗನ ಮೇಲೆ ಇದ್ದ 79 ಗ್ರಾಂ ತೂಕದ ಚಿನ್ನದ ಸರ, ಉಂಗುರಗಳನ್ನು ಗಮನಿಸಿದ ಕಳ್ಳರು ಕಣ್ಣಾ ಮುಚ್ಚಾಲೆ ಆಡುವ ನೆಪದಲ್ಲಿ ಬಾಲಕನನ್ನು ಕರೆದುಕೊಂಡು ಹೋಗಿದ್ದಾರೆ. ಆತನ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ.
ತಂದೆಯ ಬಳಿ ಮಗ ಅಳುತ್ತಾ ಬಂದಾಗ ಈ ವಿಚಾರ ಬೆಳಕಿಗೆ ಬಂದಿದ್ದು, ಗೋವಿಂದರಾಜ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಸಿಸಿಟಿವಿ ಪರಿಶೀಲನೆ ಸಂದರ್ಭದಲ್ಲಿ ಅಪರಿಚಿತರಿಬ್ಬರು ಬೈಕ್ ನಲ್ಲಿ ಅನುಮಾನಾಸ್ಪದವಾಗಿ ಆಗಮಿಸಿ ವಾಪಸ್ ತೆರಳಿರುವುದು ಕಂಡುಬಂದಿದೆ. ಪೊಲೀಸರು ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.