ಬೆಂಗಳೂರು: ರಾಜ್ಯದಲ್ಲಿ ಮದುವೆಗಳಿಗೆ ಮತ್ತಷ್ಟು ನಿರ್ಬಂಧ ಹೇರಲಾಗುವುದು ಎನ್ನಲಾಗಿದೆ. ಕೊರೊನಾ ಸೋಂಕು ತಡೆಯುವ ಉದ್ದೇಶದಿಂದ ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿಗೊಳಿಸಲಾಗಿದೆ. ಲಾಕ್ಡೌನ್ ಸಂದರ್ಭದಲ್ಲಿ ಮದುವೆಗೆ 50 ಜನರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಈಗ ಮತ್ತಷ್ಟು ನಿರ್ಬಂಧ ಹೇರಲಾಗುವುದು.
ಇನ್ನು ಮುಂದೆ ಕಲ್ಯಾಣ ಮಂಟಪ, ಸಮುದಾಯ ಭವನಗಳಲ್ಲಿ ಮದುವೆ ಮಾಡದಂತೆ ನಿರ್ಬಂಧ ವಿಧಿಸುವ ಸಾಧ್ಯತೆ ಇದೆ. ಮನೆಗಳಲ್ಲಿ ಮಾತ್ರ ಮದುವೆ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗುತ್ತದೆ. ಮದುವೆಯಲ್ಲಿ 40 ಜನರಿಗೆ ಮಾತ್ರ ಅವಕಾಶ ನೀಡುವ ಸಾಧ್ಯತೆ ಎಂದು ಹೇಳಲಾಗಿದೆ.