
ಮಂಗಳೂರು: ನಾಪತ್ತೆಯಾಗಿದ್ದ ಮಂಗಳೂರು ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ಅನ್ಯಧರ್ಮಿಯ ಯುವಕನ ಮದುವೆಯಾದ ಘಟನೆ ಬೆಳಕಿಗೆ ಬಂದಿದೆ.
ಮಂಗಳೂರಿನ ಹಿಂದೂ ಧರ್ಮದ ವಿಸ್ಮಯಾ ಎನ್ನುವ ವಿದ್ಯಾರ್ಥಿನಿ ಕೇರಳದ ಅಶ್ವಕ್ ಎನ್ನುವ ಯುವಕನನ್ನು ಮದುವೆಯಾಗಿದ್ದಾರೆ. ಈ ಪ್ರಕರಣ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದು, ಮದುವೆಗೆ ಕೋರ್ಟ್ ಅನುಮತಿ ನೀಡಿದೆ.
ಜೂನ್ 30ರಂದು ಉಳ್ಳಾಲದಿಂದ ವಿದ್ಯಾರ್ಥಿನಿ ವಿಸ್ಮಯ ಅವರನ್ನು ಕಾಸರಗೋಡು ವಿದ್ಯಾನಗರದ ಮಹಮದ್ ಅಶ್ವಕ್ ಅಪಹರಿಸಿದ್ದಾನೆ ಎಂದು ವಿದ್ಯಾರ್ಥಿನಿಯ ತಂದೆ ವಿನೋದ್ ಮಂಗಳೂರಿನ ಪಾಂಡೇಶ್ವರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಪುತ್ರಿಯನ್ನು ಮತಾಂತರಗೊಳಿಸಲು ಅಪಹರಣ ಮಾಡಲಾಗಿದೆ ಎಂದು ಆರೋಪಿಸಿದ್ದರು. ಇದೊಂದು ಲವ್ ಜಿಹಾದ್ ಪ್ರಕರಣವಾಗಿದ್ದು, ತನಿಖೆ ನಡೆಸಬೇಕೆಂದು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಒತ್ತಾಯಿಸಿದ್ದರು.