
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ವೇಗಮಡಗು ಗ್ರಾಮದಲ್ಲಿ ಯುವಕನೊಬ್ಬ ಒಂದೇ ಮುಹೂರ್ತದಲ್ಲಿ ಸಹೋದರಿಯರನ್ನು ಮದುವೆಯಾಗಿದ್ದಾನೆ.
ಚಿನ್ನಬಾಲೇಪಲ್ಲಿ ಗ್ರಾಮದ ವರ ಉಮಾಪತಿ ವೇಗಮಡಗು ಗ್ರಾಮದ ಸುಪ್ರಿಯಾ ಮತ್ತು ಲಲಿತಾ ಸಹೋದರಿಯರನ್ನು ಮೇ 7 ರಂದು ಮದುವೆಯಾಗಿದ್ದಾರೆ.
ಹಿರಿಯ ಮಗಳು ಸುಪ್ರಿಯಾ ಅವರಿಗೆ ಮಾತು ಬಾರದ ಕಾರಣ ಆಕೆಗೆ ಮದುವೆ ಮಾಡಲು ಕಷ್ಟವಾಗುತ್ತದೆ ಎಂದು ಪೋಷಕರು ಕಂಗಾಲಾಗಿದ್ದರು. ಮೊದಲ ಮಗಳನ್ನು ಮದುವೆಯಾದರೆ ಎರಡನೇ ಮಗಳನ್ನು ಕೊಟ್ಟು ಮದುವೆ ಮಾಡುವುದಾಗಿ ಉಮಾಪತಿಗೆ ತಿಳಿಸಿದ್ದು, ಅಕ್ಕನಿಗೆ ಮದುವೆಯಾಗುವುದಿಲ್ಲ ಎಂದು ಲಲಿತಾ ಕೂಡ ಒಪ್ಪಿಕೊಂಡಿದ್ದಾರೆ.
ಹಿರಿಯರ ಒಪ್ಪಿಗೆ ಮೇರೆಗೆ ಸುಪ್ರಿಯಾ ಮತ್ತು ಲಲಿತಾ ಅವರೊಂದಿಗೆ ಉಮಾಪತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.