ದಾಂಪತ್ಯ ಮುರಿದುಬೀಳುವುದಕ್ಕೆ ನಾನಾ ಕಾರಣಗಳು. ಕೆಲವನ್ನು ಸರಿದೂಗಿಸಿಕೊಂಡು ಹೋಗಬಹುದಾದರೂ, ಮನಸ್ಥಿತಿ ಪೂರಕವಾಗಿರದ ಕಾರಣ ಹೊಂದಾಣಿಕೆ ಆಗುವುದಿಲ್ಲ. ವಿಚ್ಛೇದನ ಪ್ರಕರಣ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಂ.ಎಲ್. ರಘುನಾಥ್ ಅವರು ಬಳ್ಳಾರಿಯಲ್ಲಿ ಜಿಲ್ಲಾ ನ್ಯಾಯಾಧೀಶರಾಗಿದ್ದಾಗ ನಡೆದ ವಿಚ್ಛೇದನದ ಪ್ರಕರಣವನ್ನು ನೆನಪಿಸಿಕೊಂಡಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ.
ದಾಂಪತ್ಯ ವಿಚ್ಛೇದನ ಪ್ರಕರಣದಲ್ಲಿ ಗಮನ ಸೆಳೆದ ಪ್ರಕರಣ ಇದು. ಮ್ಯಾಗಿ ಕೇಸ್ ಎಂದೇ ಜನಪ್ರಿಯ. ನಗರ ಜೀವನ ಶೈಲಿ ಧಾವಂತದ್ದು. ಅನೇಕ ಯುವ ಜೋಡಿಗೆ ಇನ್‌ಸ್ಟಂಟ್ ಆಹಾರವೇ ಬದುಕಿಗೆ ಆಧಾರ. ಪತ್ನಿಗೆ ಮ್ಯಾಗಿ ಹೊರತಾಗಿ ಬೇರಾವ ಅಡುಗೆಯೂ ಬರಲ್ಲ. ಅಡುಗೆ ಕಲಿತು ಮಾಡಬೇಕೆಂಬ ಇರಾದೆಯೂ ಇಲ್ಲ.
ಇಂದಲ್ಲ, ನಾಳೆ ಪತ್ನಿ ಅಡುಗೆ ಕಲಿತು ಮನೆ ಅಡುಗೆ ಮಾಡಿ ಬಡಿಸಬಹುದು ಎಂದು ಪತಿ ಕಾಯುತ್ತಿದ್ದ. ಆದರೆ ಪತ್ನಿ “ಮ್ಯಾಗಿ” ಹೊರತಾಗಿ ಬೇರೇನೂ ಮಾಡದ ಕಾರಣ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ.
ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್: ನಗದುರಹಿತ ಚಿಕಿತ್ಸೆ ಒದಗಿಸುವ ʼಕರ್ನಾಟಕ ಆರೋಗ್ಯ ಸಂಜೀವಿನಿʼ ಯೋಜನೆಗೆ ಶೀಘ್ರದಲ್ಲೇ ಚಾಲನೆ
ವಿಚಾರಣೆ ದಿನ ಪತಿ ಹೇಳಿದ, ನನ್ನ ಪತ್ನಿ ನಿತ್ಯ ಪ್ರಾವಿಷನ್ ಸ್ಟೋರ್‌ಗೆ ಹೋಗಿ ಇನ್‌ಸ್ಟಂಟ್ ನೂಡಲ್ಸ್ ಮಾತ್ರ ತರುತ್ತಾಳೆ. ಬೆಳಗ್ಗೆ ಉಪಾಹಾರಕ್ಕೆ, ಮಧ್ಯಾಹ್ನ ಊಟಕ್ಕೆ, ರಾತ್ರಿಯ ಊಟಕ್ಕೆ ನೂಡಲ್ಸ್ ಬಿಟ್ಟು ಬೇರೇನೂ ಮಾಡುತ್ತಿಲ್ಲ. ಸಹಿಸಿಕೊಂಡು, ಹೊಂದಿಕೊಂಡು ಬದುಕು ಸಾಗಿಸಿ ಸಾಕಾಗಿ ಹೋಗಿದೆ. ವಿಚ್ಛೇದನ ಕೊಟ್ಟುಬಿಡಿ ಎಂದ. ಕೊನೆಗೆ ಈ ಪ್ರಕರಣ, ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನಕ್ಕೆ ಒಳಗಾಯಿತು ಎಂಬುದನ್ನು ನ್ಯಾಯಾಧೀಶ ಎಂಎಲ್ ರಘುನಾಥ್ ಸ್ಮರಿಸಿದರು.
“ವಿಚ್ಛೇದನ ಪಡೆಯುವ ಮೊದಲು ದಂಪತಿಗಳು ಕನಿಷ್ಠ ಒಂದು ವರ್ಷ ಒಟ್ಟಿಗೆ ಇರಬೇಕಾಗುತ್ತದೆ. ಅಂತಹ ಕಾನೂನು ಇಲ್ಲದಿದ್ದರೆ ಮದುವೆ ಮಂಟಪಗಳಿಂದಲೇ ನೇರವಾಗಿ ವಿಚ್ಛೇದನ ಅರ್ಜಿಗಳನ್ನು ಸಲ್ಲಿಸುವ ಪ್ರಕರಣಗಳು ಹೆಚ್ಚಾಗುತ್ತಿದ್ದವು” ಎಂದರು.