alex Certify ಶಾಕಿಂಗ್…! ಕೊರೊನಾದಿಂದ ಕೆಲಸವಿಲ್ಲದೆ ಮೈ ಮಾರಿಕೊಳ್ಳುವ ಪರಿಸ್ಥಿತಿ: ಹೀಗಾಯ್ತು ಸಂಸಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್…! ಕೊರೊನಾದಿಂದ ಕೆಲಸವಿಲ್ಲದೆ ಮೈ ಮಾರಿಕೊಳ್ಳುವ ಪರಿಸ್ಥಿತಿ: ಹೀಗಾಯ್ತು ಸಂಸಾರ

ಬೆಂಗಳೂರು: ಕಳೆದ ಒಂದು ವರ್ಷಕ್ಕೂ ಅಧಿಕ ಅವಧಿಯಿಂದ ಕೊರೊನಾ ಸೋಂಕು ಇನ್ನಿಲ್ಲದಂತೆ ಕಾಡುತ್ತಿದೆ. ಕೊರೋನಾ ಆರ್ಥಿಕವಾಗಿ ದೊಡ್ಡ ಪೆಟ್ಟು ನೀಡಿದೆ. ಕೊರೊನಾದಿಂದ ಅಪಾರ ಸಂಖ್ಯೆಯ ಜನ ಕೆಲಸ ಕಳೆದುಕೊಂಡಿದ್ದಾರೆ. ಹೀಗೆ ಕೆಲಸ ಕಳೆದುಕೊಂಡ ವ್ಯಕ್ತಿಯೊಬ್ಬ ಹಣಗಳಿಸಲು ಅಡ್ಡದಾರಿ ಹಿಡಿದು ಆತನ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ.

ಗಂಡನಿಂದ ಡೈವೋರ್ಸ್ ಪಡೆಯಲು ಪತ್ನಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. 27 ವರ್ಷದ ವ್ಯಕ್ತಿ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದು, ಕೊರೊನಾದಿಂದ ಕೆಲಸ ಕಳೆದುಕೊಂಡಿದ್ದ. ಇತ್ತೀಚೆಗೆ ಆತ ಲ್ಯಾಪ್ಟಾಪ್ ಮತ್ತು ಫೋನ್ ನಲ್ಲಿ ಬ್ಯಸಿಯಾಗಿರುವುದನ್ನು ಗಮನಿಸಿದ್ದ ಪತ್ನಿ ಆತನ ಲ್ಯಾಪ್ಟಾಪ್ ಪರಿಶೀಲಿಸಿದ್ದಾರೆ.

ಈ ವೇಳೆ ಲ್ಯಾಪ್ಟಾಪ್ನಲ್ಲಿ ಗಂಡನ ಅಶ್ಲೀಲ ಫೋಟೊಗಳು ಮತ್ತು ಅನೇಕ ಮಹಿಳೆಯರು ಫೋಟೋಗಳು ಕಂಡುಬಂದಿವೆ. ಗಂಡನ್ನು ವಿಚಾರಿಸಿದಾಗ ಆತ ಸೆಕ್ಸ್ ವರ್ಕರ್ ಆಗಿ ಕೆಲಸ ಮಾಡುತ್ತಿದ್ದ. ಹಣ ನೀಡುತ್ತಿದ್ದ ಯುವತಿಯರು ಮತ್ತು ಮಹಿಳೆಯರೊಂದಿಗೂ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಸೆಕ್ಸ್ ವರ್ಕರ್ ಆಗಿ ಗಂಟೆಗೆ 3 ರಿಂದ 5 ಸಾವಿರ ರೂ. ಪಡೆಯುತ್ತಿದ್ದ ಎನ್ನುವುದು ಗೊತ್ತಾಗಿದೆ.

ಗಂಡನ ಈ ವಿಚಾರ ಗೊತ್ತಾಗುತ್ತಲೇ ಪತ್ನಿ ಡೈವೋರ್ಸ್ ನೀಡಲು ಮುಂದಾಗಿದ್ದು, ಮಲ್ಲೇಶ್ವರಂನ ವನಿತಾ ಸಹಾಯವಾಣಿ ಸಂಪರ್ಕಿಸಿ ಸಂಕಷ್ಟ ಹೇಳಿಕೊಂಡಿದ್ದು, ವಿಚ್ಛೇದನ ಪಡೆಯುಲು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...