
ಶಿಗ್ಗಾಂವಿ: ಮದುವೆಯಾದ 10 ಗಂಟೆಯಲ್ಲಿಯೇ ಹೃದಯಾಘಾತದಿಂದ ವರ ಸಾವನ್ನಪ್ಪಿದ ದಾರುಣ ಘಟನೆ ಶಿಗ್ಗಾಂವಿ ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ನಡೆದಿದೆ.
ಕುಟುಂಬದವರು, ಬಂಧು ಬಾಂಧವರು ಸೇರಿ ಮದುವೆ ಸಂಭ್ರಮದಲ್ಲಿದ್ದು, ಮದುವೆ ನಡೆದ 10 ಗಂಟೆಯಲ್ಲಿ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.
ಶ್ಯಾಡಂಬಿಯ ಶಿವಾನಂದ(34) ಮೃತಪಟ್ಟ ವ್ಯಕ್ತಿ. ಮಂಗಳವಾರ ಮಧ್ಯಾಹ್ನ 12:29 ಕ್ಕೆ ಮತ್ತಿಗಟ್ಟಿ ಗ್ರಾಮದ ಯಲ್ಲಪ್ಪ ಅವರ ಪುತ್ರಿಯೊಂದಿಗೆ ಶಿವಾನಂದ ಮದುವೆಯಾಗಿದ್ದರು. ರಾತ್ರಿ ಒಮ್ಮೆಲೆ ವಾಂತಿ ಮಾಡಿಕೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೇ ಹೃದಯಾಘಾತದಿಂದ ರಾತ್ರಿ 10 ಗಂಟೆ ವೇಳೆಗೆ ಮೃತಪಟ್ಟಿದ್ದಾರೆ.