ಬೆಂಗಳೂರು: ರಾಜ್ಯದಲ್ಲಿ ಕೊರೋನಾ ತಡೆಗೆ ಲಾಕ್ ಡೌನ್ ಜಾರಿ ಮಾಡಿದ್ರೂ, ಅನೇಕರು ಎಚ್ಚೆತ್ತುಕೊಂಡಂತಿಲ್ಲ. ಕೆಲವರು ಅನಗತ್ಯವಾಗಿ ಓಡಾಡುತ್ತಿದ್ದಾರೆ.
ನಂದಿನಿ ಹಾಲು ಪೂರೈಕೆ ಮಾಡುವ ಕ್ಯಾಂಟರ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ರಸ್ತೆಯಲ್ಲಿ ಸಂಚರಿಸುವ ಪ್ರತಿ ವಾಹನಗಳನ್ನು ತಡೆದು ಪೊಲೀಸರು ತಪಾಸಣೆ ಮಾಡುತ್ತಿದ್ದು, ಪೊಲೀಸರ ಕಣ್ಣುತಪ್ಪಿಸಿ ಹಾಲಿನ ಕ್ಯಾಂಟರ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯರನ್ನು ಬೆಂಗಳೂರಿನ ಬಿಡದಿಯ ಬಳಿ ಪೊಲೀಸರು ತಡೆದಿದ್ದಾರೆ.
ಹಾಲಿನ ಕ್ಯಾಂಟರ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯರು ಮದುವೆಗೆ ಹೊರಟಿರುವುದಾಗಿ ಹೇಳಿದ್ದು, ಕ್ಯಾಂಟರ್ ಚಾಲಕ ತಮ್ಮ ಸಹೋದರ ಹೇಳಿಕೊಂಡಿದ್ದಾರೆ. ಇದನ್ನು ಒಪ್ಪದ ಪೊಲೀಸರು ಲಾಕ್ ಡೌನ್ ಅಂದ್ರೆ ಲಾಕ್ ಡೌನ್ ಅಷ್ಟೇ. ಯಾರೂ ಅನಗತ್ಯವಾಗಿ ಓಡಾಡಬಾರದು ಎಂದು ತಾಕೀತು ಮಾಡಿದ್ದಾರೆ.