ಆಯುರ್ವೇದ ಶಾಸ್ತ್ರದ ಪ್ರಕಾರ ಬೆಳ್ಳಿ ಹಾಗೂ ಬಂಗಾರದ ಪಾತ್ರೆಯಲ್ಲಿ ಆಹಾರ ಸೇವನೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ವಾಸ್ತವವಾಗಿ ಹಿಂದೂ ಧರ್ಮದಲ್ಲಿ ಪವಿತ್ರತೆಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಹಾಗಾಗಿ ಬೆಳ್ಳಿ, ಬಂಗಾರ, ಹಿತ್ತಾಳೆ ಹಾಗೂ ಕಂಚಿನ ಪಾತ್ರೆಯಲ್ಲಿ ಆಹಾರ ಸೇವನೆ ಮಾಡುವಂತೆ ಹಿರಿಯರು ಸಲಹೆ ನೀಡುತ್ತಾರೆ.
ಪೌರಾಣಿಕ ಗ್ರಂಥದಲ್ಲಿಯೂ ಈ ಬಗ್ಗೆ ವರ್ಣನೆ ಇದೆ. ವೈಜ್ಞಾನಿಕವಾಗಿಯೂ ಇದು ಸಾಬೀತಾಗಿದೆ. ಸ್ವಾಭಾವಿಕವಾಗಿ ಬೆಳ್ಳಿ ಪಾತ್ರೆಗಳು ತಂಪಾಗಿರುವುದರಿಂದ ದೇಹದಲ್ಲಿನ ಪಿತ್ತ ರಸವನ್ನು ದೂರ ಮಾಡುತ್ತದೆ. ದೃಷ್ಟಿ ದೋಷ ನಿವಾರಣೆ ಮಾಡುವ ಜೊತೆಗೆ ಮಾನಸಿಕ ಶಾಂತಿ ನೀಡುತ್ತದೆ. ಹಾಗೆ ದೇಹ ತಂಪಾಗಿರುವಂತೆ ನೋಡಿಕೊಳ್ಳುತ್ತದೆ.
ಪುರಾಣಗಳ ಪ್ರಕಾರ ಶಿವಪುತ್ರ ಕಾರ್ತೀಕೇಯನ ಕಾರಣ ಭೂಮಿಯಲ್ಲಿ ಧಾತುಗಳ ಉತ್ಪತ್ತಿಯಾಗಿದೆ. ಇದು ಪವಿತ್ರವಾದದ್ದು. ಕಂಚಿನ ಬಳಕೆಯಿಂದ ಪಿತ್ತರಸ ಶುದ್ಧವಾಗುತ್ತದೆ. ಬುದ್ದಿಯನ್ನು ಇದು ಹೆಚ್ಚಿಸುತ್ತದೆ.
ಹಿತ್ತಾಳೆ ಪಾತ್ರೆಯಲ್ಲಿ ಅಡುಗೆ ಮಾಡುವುದರಿಂದ ಪಿತ್ತ ನಾಶವಾಗುತ್ತದೆ. ಹಾಗೆ ಬೆಳ್ಳಿ ಹಾಗೂ ಚಿನ್ನದ ಪಾತ್ರೆಯಲ್ಲಿ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿರುವ ಚಿನ್ನ ಹಾಗೂ ಬೆಳ್ಳಿ ಪ್ರಮಾಣದಲ್ಲಿ ಸಮತೋಲನ ಕಾಯ್ದುಕೊಳ್ಳುತ್ತದೆ.