ಹಾಸನ: ಮದುವೆ ನಿಶ್ಚಯವಾಗಿದ್ದ ಯುವತಿಗೆ ಬಲವಂತವಾಗಿ ತಾಳಿಕಟ್ಟಿ ಎಳೆದುಕೊಂಡು ಹೋದ ಘಟನೆ ಹಾಸನ ಜಿಲ್ಲೆಯಲ್ಲಿ ಸಕಲೇಶಪುರದ ಕುಶಾಲನಗರ ಬಡಾವಣೆಯಲ್ಲಿ ನಡೆದಿದೆ.
ಕುಶಾಲನಗರ ಬಡಾವಣೆಯ ಯುವತಿ ಮನೆಗೆ ಬಂದಿದ್ದ ಯುವಕ ತಾಳಿಕಟ್ಟಿ ಕರೆದೊಯ್ದಿರುವುದಾಗಿ ಯುವತಿಯ ತಾಯಿ ದೂರು ನೀಡಿದ್ದಾರೆ. ಅರಕೆರೆ ಗ್ರಾಮದ ಯುವಕ ಸತೀಶ್ ವಿರುದ್ಧ ಸಕಲೇಶಪುರ ಟೌನ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಸತೀಶ್ ಯುವತಿಯನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿದ್ದಾನೆ. ಯುವತಿಗೆ ಮದುವೆ ನಿಶ್ಚಯ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಹೀಗಾಗಿ 15 ಸ್ನೇಹಿತರು ಸತೀಶನನ್ನು ಕರೆದುಕೊಂಡು ಬಂದಿದ್ದಾರೆ. ಯುವತಿಗೆ ಮನೆಗೆ ಆತನನ್ನು ಕರೆ ತಂದು ಬಲವಂತವಾಗಿ ಮದುವೆಯಾಗಿದ್ದಾರೆ. ತಾಳಿಕಟ್ಟಿ ಎಳೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.