ಬೆಂಗಳೂರು: ಸಿಇಟಿ -2024ರ ಸಿಬಿಎಸ್ಇ, ಸಿ.ಐ.ಎಸ್.ಸಿ.ಇ., ಐಜಿಸಿಎಸ್ಇ ಅಂಕಗಳನ್ನು ಮೇ 28ರ ಸಂಜೆ 5:30 ರೊಳಗೆ ದಾಖಲಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
12ನೇ ತರಗತಿಯನ್ನು ಸಿಬಿಎಸ್ಇ(ಜಮ್ಮು ಮತ್ತು ಕಾಶ್ಮೀರ ಸೇರಿ), ಸಿ.ಐ.ಎಸ್.ಸಿ.ಇ., 10+2, ಐಜಿಸಿಎಸ್ಇ ಮತ್ತಿತರ ಬೋರ್ಡ್ ಗಳಲ್ಲಿ 2024ರಲ್ಲಿ ಪೂರ್ಣಗೊಳಿಸಿದವರು ಮತ್ತು ಕರ್ನಾಟಕ ದ್ವಿತೀಯ ಪಿಯುಸಿ, 12ನೇ ತರಗತಿಯನ್ನು 2024 ಕ್ಕಿಂತ ಮೊದಲೇ ಉತ್ತೀರ್ಣರಾಗಿರುವ ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ತಮ್ಮ 12ನೇ ತರಗತಿಯ ಅಂಕಗಳನ್ನು ಮೇ 28ರ ಸಂಜೆ 5.30ವರೆಗೆ ದಾಖಲಿಸುವುದು.
ಇಲ್ಲಿಯವರೆಗೆ ಅಂಕಗಳನ್ನು ದಾಖಲಿಸದೇ ಇರುವವರು ತಮ್ಮ ಅಂಕಗಳನ್ನು ದಾಖಲಿಸುವಂತೆ ಕೆಇಎ ತಿಳಿಸಿದೆ.
ಆರ್ಕಿಟೆಕ್ಚರ್ ಕೋರ್ಸ್ ಗಳ ಪ್ರವೇಶಕ್ಕಾಗಿ ಅಭ್ಯರ್ಥಿಗಳು 2024ರ ನಾಟಾ ಪರೀಕ್ಷೆಯ ಅಂಕಗಳನ್ನು ಅರ್ಹತೆಯ ಅನುಗುಣವಾಗಿ ಈ ದಿನಾಂಕದೊಳಗೆ ದಾಖಲಿಸಬಹುದಾಗಿದೆ.
ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ http://kea.kar.nic.in ವೆಬ್ಸೈಟ್ ಭೇಟಿ ನೀಡುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.