
ರಾಘವೇಂದ್ರ ಎಂ ನಾಯಕ್ ರಚಿಸಿ ನಿರ್ದೇಶಿಸಿರುವ ʼಮಾರಿಗೋಲ್ಡ್ʼ ಚಿತ್ರದ ಚಿತ್ರದ ‘ಸಿಹಿ ಜೇನ ಮೇಲೆ’ ಎಂಬ ವಿಡಿಯೋ ಹಾಡು ಇಂದು ಜನಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ.
ಅನುರಾಧ ಭಟ್ ಈ ಹಾಡಿಗೆ ಧ್ವನಿಯಾಗಿದ್ದು, ವೀರಸಮರ್ಥ್ ಸಂಗೀತ ಸಂಯೋಜನೆ ನೀಡಿದ್ದಾರೆ. ಯೋಗರಾಜ್ ಭಟ್ ಸಾಹಿತ್ಯವಿದೆ.
ಈ ಚಿತ್ರವನ್ನು ಆರ್ ವಿ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ರಘುವರ್ಧನ್ ನಿರ್ಮಾಣ ಮಾಡಿದ್ದು, ದೂದ್ ಪೇಡ ದಿಗಂತ್ ಮತ್ತು ಸಂಗೀತ ಶೃಂಗೇರಿ ಪ್ರಮುಖ ಪಾತ್ರದಲ್ಲಿದ್ದಾರೆ.
ಇನ್ನುಳಿದಂತೆ ಯಶ್ ಶೆಟ್ಟಿ, ಕಾಕ್ರೋಚ್ ಸುದೀ, ಸಂಪತ್ ಮೈತ್ರಿಯ, ವಜ್ರಂಗ್ ಶೆಟ್ಟಿ, ಬಾಲರಾಜವಾಡಿ, ಸಂದೀಪ್ ಮಲಾನಿ ಪಾತ್ರವರ್ಗದಲ್ಲಿದ್ದಾರೆ. ಕೆ ಎಂ ಪ್ರಕಾಶ್ ಪ್ರಕಾಶ್ ಸಂಕಲನ, ಕೆ ಎಸ್ ಚಂದ್ರಶೇಖರ್ ಛಾಯಾಗ್ರಹಣ, ಅರ್ಜುನ್ ರಾಜ್ ಸಾಹಸ ನಿರ್ದೇಶನವಿದೆ.