alex Certify ಪುರುಷರು ಮಹಿಳೆಯರಂತೆ ವೇಷ ಧರಿಸಿ ಹಾಸ್ಯ ಪಾತ್ರ ಮಾಡುವುದನ್ನ ಟೀಕಿಸಿದ ಖ್ಯಾತ ನಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುರುಷರು ಮಹಿಳೆಯರಂತೆ ವೇಷ ಧರಿಸಿ ಹಾಸ್ಯ ಪಾತ್ರ ಮಾಡುವುದನ್ನ ಟೀಕಿಸಿದ ಖ್ಯಾತ ನಟ

ಟಿವಿ ಕಾರ್ಯಕ್ರಮಗಳಲ್ಲಿ ಪುರುಷ ಕಲಾವಿದರು ಮಹಿಳೆಯರಂತೆ ವೇಷ ಧರಿಸಿ ಹಾಸ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದನ್ನ ಹಿರಿಯ ನಟ ಮುಖೇಶ್ ಖನ್ನಾ ಟೀಕಿಸಿದ್ದಾರೆ. ಚಾಟ್ ಶೋನಲ್ಲಿ ನಟ ಅಲಿ ಅಸ್ಗರ್ ಅವರೊಂದಿಗೆ ಸಂವಾದ ನಡೆಸುತ್ತಾ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲಿ ಅಸ್ಗರ್ ಅವರು ʼದಿ ಕಪಿಲ್ ಶರ್ಮಾ ಶೋʼ ನಲ್ಲಿ ‘ದಾದಿ’ ಪಾತ್ರದಲ್ಲಿ ನಟಿಸಿದ್ದಾರೆ.

ಮುಖೇಶ್ ಖನ್ನಾ, ಅಲಿ ಅಸ್ಗರ್ ಅವರ ದಾದಿ ಪಾತ್ರವನ್ನು ಯೋಗ್ಯವಾದುದಲ್ಲ ಎಂದು ಕರೆದರೆ, ಅಲಿ ಆ ಕಾರ್ಯಕ್ರಮದ ನಿರ್ಮಾಪಕರನ್ನು ಸಮರ್ಥಿಸಿಕೊಂಡು ಅಜ್ಜಿಯ ಪಾತ್ರವನ್ನು ಏಕೆ ಮಾಡಲಾಯಿತು ಎಂಬುದನ್ನು ಬಹಿರಂಗಪಡಿಸಿದರು.

ತಮ್ಮ ಅಧಿಕೃತ ಏಕ್ಸ್ ಖಾತೆಯಲ್ಲಿ ಈ ಬಗ್ಗೆ ತಿಳಿಸಿರುವ ಮುಖೇಶ್ ಖನ್ನಾ, “ಗಂಡಸರು ಹೆಣ್ಣಿನ ಬಟ್ಟೆ ಹಾಕಿಕೊಂಡು ಡ್ಯಾನ್ಸ್ ಮಾಡುವುದು ಅಥವಾ ನಟಿಸುವುದು ನನಗೆ ಇಷ್ಟವಿಲ್ಲ. ಆದರೆ ನಾನು ಯಾರ ಹೆಸರನ್ನೂ ಹೇಳುವುದಿಲ್ಲ. ಒಂದು ಕಾರ್ಯಕ್ರಮವಿದೆ, ಅಲ್ಲಿ ಹಾಸ್ಯದ ಹೆಸರಲ್ಲಿ ಇದನ್ನೆಲ್ಲಾ ಮಾಡಲಾಗುತ್ತದೆ” ಎಂದಿದ್ದಾರೆ.

ಅಲಿ ಅವರೊಂದಿಗಿನ ಚಾಟ್‌ನ ವೀಡಿಯೊವನ್ನು ಹಂಚಿಕೊಂಡ ಮುಖೇಶ್ ಖನ್ನಾ, ಕಪಿಲ್ ಶರ್ಮಾ ಶೋನಲ್ಲಿ ಮಹಿಳೆಯ ಪಾತ್ರವನ್ನು ಅಲಿ ಹೇಗೆ ಸಮರ್ಥಿಸಿಕೊಂಡರು ಎಂಬುದನ್ನು ಸಹ ಉಲ್ಲೇಖಿಸಿದ್ದಾರೆ.

ಶಕ್ತಿಮಾನ್ ನಟ ಮುಖೇಶ್ ಖನ್ನಾ, ಅಲಿಯನ್ನು ದಾದಿಯ ಪಾತ್ರದಲ್ಲಿ ಟೀಕಿಸಿದಾಗ ಮತ್ತು ಅದನ್ನು ಯೋಗ್ಯವಾದುದಲ್ಲ ಎಂದು ಕರೆದಾಗ, ಅಲಿ ಹೇಳುತ್ತಾರೆ “ಇದು ನಿಮ್ಮ ವೈಯಕ್ತಿಕ ಅಭಿಪ್ರಾಯ. ಹಾಗಾಗಿ ನಾನು ಏನನ್ನೂ ಹೇಳಲಾರೆ. ಜನರು ಯಾವಾಗಲೂ ಹುಡುಗನನ್ನು ಏಕೆ ಹುಡುಗಿಯಾಗಿ ಮಾಡುತ್ತಾರೆ ಎಂದು ಕೇಳುತ್ತಾರೆ. ನಾನು ಅರ್ಥಮಾಡಿಕೊಂಡಂತೆ ಅದಕ್ಕೆ ಕಾರಣವೆಂದರೆ ಯಾವ ಅಜ್ಜಿಯೂ ನನ್ನಂತೆ ಇರಲಾರರು.” ಎಂದು ತಮಾಷೆ ಮಾಡಿದ್ದಾರೆ. ಮಾತು ಮುಂದುವರೆಸಿ, ತಡರಾತ್ರಿವರೆಗೂ ಚಿತ್ರೀಕರಣ ಮಾಡುವುದರಿಂದ ಹಿರಿಯ ನಟಿಯರಿಗೆ ರಾತ್ರಿ ವೇಳೆಯೂ ನಿದ್ದೆಯಿಲ್ಲದೇ ಕೆಲಸ ಮಾಡುವುದು ಕಷ್ಟಕರವಾಗುತ್ತೆ ಎಂದಿದ್ದಾರೆ. ಆದರೆ ಅವರ ಮಾತಿಗೆ ಕಡಿವಾಣ ಹಾಕಿದ ಮುಖೇಶ್ ಖನ್ನಾ ಇದು ಸರಿಯಾದ ಕಾರಣವಲ್ಲ, ನಟಿಯರೂ ತಡರಾತ್ರಿವರೆಗೆ ಕೆಲಸ ಮಾಡುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ತನ್ನ ಎರಡನೇ ಕಾರಣವನ್ನು ನೀಡುತ್ತಾ ಅಲಿ ಅಸ್ಗರ್, “ನಾವು ಪುರುಷರಿಂದ ಸ್ತ್ರೀ ಪಾತ್ರ ಮಾಡಿಸಿದಾಗ, ನಾವು ಸಾಕಷ್ಟು ಸೃಜನಶೀಲ ಸ್ವಾತಂತ್ರ್ಯವನ್ನು ತೆಗೆದುಕೊಳ್ಳುತ್ತೇವೆ ಮತ್ತು ಸಾಕಷ್ಟು ಮಸ್ತಿ ಮಾಡಬಹುದು. ಈ ವೇಳೆ ಮಹಿಳಾ ಪಾತ್ರಧಾರಿ ಅಸಮಾಧಾನಗೊಳ್ಳುವುದೂ ಸಹ ಇರುವುದಿಲ್ಲ” ಎಂದು ಹೇಳಿದರು.

ಅಸ್ಗರ್ ಅಲಿ 2013 ರಿಂದ 2016 ರವರೆಗೆ ಕಾಮಿಡಿ ನೈಟ್ಸ್ ವಿಥ್ ಕಪಿಲ್‌ನಲ್ಲಿ ಮತ್ತು 2016 ರಿಂದ 2017 ರವರೆಗೆ ದಿ ಕಪಿಲ್ ಶರ್ಮಾ ಶೋನಲ್ಲಿ ನಾನಿ ಪಾತ್ರವನ್ನು ವಹಿಸಿದ್ದರು. ಅದೇ ರೀತಿ ಗುತ್ತಿ ಪಾತ್ರಧಾರಿಯಾಗಿ ಸುನಿಲ್ ಗ್ರೋವರ್ ಕಾಮಿಡಿ ನೈಟ್ಸ್ ವಿತ್ ಕಪಿಲ್ ಕಾರ್ಯಕ್ರಮದಲ್ಲಿ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಕಾಮಿಡಿ ನೈಟ್ಸ್ ವಿತ್ ಕಪಿಲ್‌ನಲ್ಲಿ ಸ್ತ್ರೀ ಪಾತ್ರಧಾರಿಯಾಗಿ ಕಿಕು ಶರ್ದಾ ಅವರ ಜನಪ್ರಿಯತೆಯೂ ಇದೆ .

— Mukesh Khanna (@actmukeshkhanna) August 3, 2024

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...