ಮಹಿಳೆಯರು ಇಂದು ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಪುರುಷರಿಗೆ ಸಮನಾಗಿ ನಿಂತಿದ್ದಾರೆ. ವಿಜ್ಞಾನದಿಂದ, ಕ್ರೀಡೆ, ಕಲೆಗಳವರೆಗೂ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಮಿಂಚುತ್ತಿದ್ದಾರೆ.
ಇದೀಗ ಮದುವೆ ಸಮಾರಂಭಗಳಲ್ಲಿ ಮಂತ್ರೋಚ್ಛಾರಣೆಯನ್ನೂ ಮಾಡಲು ಮಹಿಳೆಯರು ಮುಂದಾಗಿದ್ದಾರೆ.
ಮೀರತ್‌ನ ನರಂಗ್ಪುರದಲ್ಲಿರುವ ಶ್ರೀಮದ್ ದಯಾನಂದ ಉತ್ಕರ್ಷ ಅರ್ಶ ಕನ್ಯಾ ಗುರುಕುಲದ ಅರ್ಚಕಿಯರು ವೇದ ಮಂತ್ರಗಳ ಪಠಣದ ಮೂಲಕ ಮದುವೆಗಳನ್ನು ನೆರವೇರಿಸಿ ಕೊಡುತ್ತಿದ್ದಾರೆ.
ದುಡುಕಿನ ನಿರ್ಧಾರ ಕೈಗೊಂಡ ಇಂಜಿನಿಯರ್; ಪತ್ನಿ, ಪುತ್ರಿಯೊಂದಿಗೆ ನಾಲೆಗೆ ಹಾರಿ ಆತ್ಮಹತ್ಯೆ
ಗುರುಕುಲದ ಪ್ರಾಂಶುಪಾಲೆ ಅಲ್ಕಾ ಶಾಸ್ತ್ರಿ ಹಾಗೂ ಇತರ ಅರ್ಚಕಿಯರಾದ ಕೃತಿಕಾ, ಅನುಭೂತಿ ಆರ್ಯ ಮತ್ತು ಇಶಿಕಾ ಗುರುಗ್ರಾಮದಲ್ಲಿ ಮದುವೆಯೊಂದನ್ನು ಶಾಸ್ತ್ರೋಕ್ತವಾಗಿ ನಡೆಸಿಕೊಟ್ಟಿದ್ದಾರೆ. ತಬಲಾ ಹಾಗೂ ಹಾರ್ಮೋನಿಯಂಗಳನ್ನು ಮಂತ್ರಪಠಣದ ವೇಳೆ ಬಳಸುವ ಈ ಮಹಿಳೆಯರು ನಿಶ್ಚಿತಾರ್ಥ ಸಮಾರಂಭಗಳನ್ನೂ ನಡೆಸಿಕೊಡುತ್ತಿದ್ದಾರೆ.