alex Certify ಶಾಕಿಂಗ್ ಮಾಹಿತಿ ನೀಡಿದ ಹವಾಮಾನ ಇಲಾಖೆ: 122 ವರ್ಷಗಳಲ್ಲೇ ಮಾರ್ಚ್ ನಲ್ಲಿ ಅತಿಹೆಚ್ಚು ತಾಪಮಾನದ ದಾಖಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್ ಮಾಹಿತಿ ನೀಡಿದ ಹವಾಮಾನ ಇಲಾಖೆ: 122 ವರ್ಷಗಳಲ್ಲೇ ಮಾರ್ಚ್ ನಲ್ಲಿ ಅತಿಹೆಚ್ಚು ತಾಪಮಾನದ ದಾಖಲೆ

ನವದೆಹಲಿ: ಭಾರತದಲ್ಲಿ ಮಾರ್ಚ್ 2022 ರಲ್ಲಿ ಕಳೆದ 122 ವರ್ಷಗಳಲ್ಲಿಯೇ ಅತ್ಯಂತ ಬಿಸಿಯಾಗಿತ್ತು ಎಂದು ಹವಾಮಾನ ಇಲಾಖೆ ಹೇಳಿದೆ. ಮಾರ್ಚ್ ತಿಂಗಳ ತಾಪಮಾನ ಎಲ್ಲಾ ದಾಖಲೆಗಳನ್ನು ಮುರಿದಿದೆ ಹವಾಮಾನ ಇಲಾಖೆಯು ಎಂದು ಹೇಳಿದೆ, ಇದು ಮಾರ್ಚ್ 1901 ರಿಂದ 122 ವರ್ಷಗಳಲ್ಲಿ ಭಾರತದ ಅತ್ಯಂತ ಬಿಸಿಯಾಗಿದೆ.

ಮಾರ್ಚ್ 2022 ರ ಮಾಸಿಕ ಸರಾಸರಿ 33.1 ಡಿಗ್ರಿ ಸೆಲ್ಸಿಯಸ್ ಆಗಿದೆ, ಇದು 2010 ರ ಸಾರ್ವಕಾಲಿಕ ದಾಖಲೆಯಾದ 33.09 ಡಿಗ್ರಿ ಸೆಲ್ಸಿಯಸ್ ಅನ್ನು ಮುರಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ಹೇಳಿದೆ.

ಐಎಮ್‌ಡಿ ಅಧಿಕಾರಿಗಳು ದೀರ್ಘಾವಧಿಯ ಶುಷ್ಕ ವಾತಾವರಣವು ವಾಯುವ್ಯ ಭಾರತದಲ್ಲಿ ತೀವ್ರವಾದ ಬಿಸಿ ವಾತಾವರಣಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ದೆಹಲಿಯ ಕೆಲವು ಭಾಗಗಳು ಗುರುವಾರ ತೀವ್ರ ಶಾಖದ ಅಲೆಯಲ್ಲಿದ್ದು, ಗರಿಷ್ಠ ತಾಪಮಾನವು ಮೂರು ಸ್ಥಳಗಳಲ್ಲಿ 41 ಡಿಗ್ರಿ ಗಡಿ ದಾಟಿದೆ.

ಹವಾಮಾನ ಇಲಾಖೆಯು ಏಪ್ರಿಲ್ 3 ಮತ್ತು 6 ರ ನಡುವೆ ಪ್ರತ್ಯೇಕ ಸ್ಥಳಗಳಲ್ಲಿ ತೀವ್ರತರವಾದ ಶಾಖದ ವಾತಾವರಣ ಉಂಟಾಗಬಹುದೆಂದು ಊಹಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...