ಬೆಂಗಳೂರು: ಮರಾಠ ಅಭಿವೃದ್ಧಿ ಪ್ರಾಧಿಕಾರಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕನ್ನಡಿಗರ ವಿರೋಧಕ್ಕೆ ಮಣಿದ ಸರ್ಕಾರ ಆದೇಶವನ್ನು ರದ್ದು ಮಾಡಿದೆ.
ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಬದಲಾಗಿ ನಿಗಮ ರಚಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಮರಾಠ ಸಮುದಾಯಕ್ಕೆ ಸೀಮಿತವಾಗಿ ನಿಗಮ ರಚಿಸಲು ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮರಾಠ ಸಮುದಾಯಕ್ಕೆ ಸೀಮಿತವಾದ ನಿಗಮ ರಚಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ಪ್ರಾಧಿಕಾರ ರಚಿಸುವಾಗ ಹೊಸದಾಗಿ ಕಾಯ್ದೆ ರೂಪಿಸಬೇಕಿದೆ. ನಿಗಮಕ್ಕೆ ಸರ್ಕಾರವೇ ತೀರ್ಮಾನ ಕೈಗೊಳ್ಳಬಹುದಾಗಿದೆ. ಮರಾಠ ಸಮುದಾಯಕ್ಕೆ ಸೀಮಿತವಾಗಿ ನಿಗಮ ರಚಿಸಲಾಗುವುದು ಎನ್ನಲಾಗಿದೆ.