alex Certify ಹಬ್ಬದಾಚರಣೆಗೆ ಇದು ಸೂಕ್ತ ಸಮಯವಲ್ಲ: ಜನತೆ ಬಳಿ ಮನವಿ ಮಾಡಿದ ವಿ.ಕೆ. ಪಾಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಬ್ಬದಾಚರಣೆಗೆ ಇದು ಸೂಕ್ತ ಸಮಯವಲ್ಲ: ಜನತೆ ಬಳಿ ಮನವಿ ಮಾಡಿದ ವಿ.ಕೆ. ಪಾಲ್​

ಸಾಲು ಸಾಲು ಹಬ್ಬಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನೀತಿ ಆಯೋಗದ ಸದಸ್ಯರು ಭಾರತೀಯರ ಬಳಿ ಮನವಿ ಮಾಡಿದ್ದಾರೆ. ಕೊರೊನಾ ವೈರಸ್​ ಮತ್ತೊಮ್ಮೆ ತನ್ನ ಭೀಕರತೆ ಪ್ರದರ್ಶಿಸುವ ಹಿನ್ನೆಲೆಯಲ್ಲಿ ಆದಷ್ಟು ಮನೆಯಲ್ಲಿಯೇ ನಿಮ್ಮ ಕುಟುಂಬಸ್ಥರ ಜೊತೆ ಹಬ್ಬ ಆಚರಿಸಿ ಎಂದು ಪಾಲ್​ ಕಿವಿಮಾತು ಹೇಳಿದ್ದಾರೆ.

ಭಾರತದ ಭವ್ಯ ಸಂಸ್ಕೃತಿ ಹಾಗೂ ಪರಂಪರೆಯನ್ನು ಈ ಬಾರಿ ನಮ್ಮ ಕುಟುಂಬಸ್ಥರ ಜೊತೆ ಸಂಭ್ರಮಿಸಲು ಸೀಮಿತ ಮಾಡೋಣ. ಅಲ್ಲದೇ ಮನೆಯಲ್ಲಿ ಅರ್ಹ ವ್ಯಕ್ತಿಗಳೆಲ್ಲರೂ ಕೊರೊನಾ ಲಸಿಕೆಯನ್ನು ತಪ್ಪದೇ ಸ್ವೀಕರಿಸಿ ಎಂದು ಪಾಲ್​ ಮನವಿ ಮಾಡಿದ್ರು.

ಸಾಲು ಸಾಲು ಹಬ್ಬಗಳ ಆಗಮನ ಹಿನ್ನೆಲೆಯಲ್ಲಿ ಆದಷ್ಟು ಸಾರ್ವಜನಿಕ ಸ್ಥಳಗಳಲ್ಲಿ ಜಮಾಯಿಸುವುದು ಬೇಡ. ಒಂದು ವೇಳೆ ಸಾರ್ವಜನಿಕ ಸ್ಥಳಕ್ಕೆ ಭೇಟಿ ನೀಡಲೇಬೇಕಾದ ಅನಿವಾರ್ಯತೆ ಬಂದರೂ ಸಹ ಮಾಸ್ಕ್​ ಹಾಗೂ ಸಾಮಾಜಿಕ ಅಂತರ ಕಡ್ಡಾಯವಾಗಿರಲಿ ಎಂದು ಹೇಳಿದ್ದಾರೆ.

ಹಬ್ಬವನ್ನು ಆಚರಿಸಲು ಇನ್ಮುಂದೆ ಸಾಕಷ್ಟು ಅವಕಾಶಗಳು ಸಿಗಲಿದೆ. ಈಗ ನಾವು ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಹೆಚ್ಚು ಮುಖ್ಯ ಎಂದು ಪಾಲ್​ ಹೇಳಿದ್ರು.

ಕೆಲವು ಪ್ರದೇಶಗಳಲ್ಲಿ ಈಗಲೂ ಕೊರೊನಾ ವೈರಸ್​ ಸೋಂಕು ಹೆಚ್ಚಾಗಿಯೇ ಇದೆ. ಇನ್ನು ಹಲವು ಕಡೆಗಳಲ್ಲಿ ಸೋಂಕು ತಹಬದಿಗೆ ಬಂದಿದೆ. ಕೊರೊನಾ 2ನೇ ಅಲೆಯು ಇನ್ನೂ ದೇಶದಲ್ಲಿದೆ. ಹೀಗಾಗಿ ಜನಸಂದಣಿ ಸೇರುವುದು ಸೂಕ್ತವಲ್ಲ. ಈ ರೀತಿ ಮಾಡಿದರೆ ನಾವೇ ಕೊರೊನಾ ವೈರಸ್​ಗೆ ಮತ್ತೊಮ್ಮೆ ಆಮಂತ್ರಣ ನೀಡಿದಂತೆ ಆಗಲಿದೆ ಎಂದು ಹೇಳಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...