alex Certify ಈ 2 ಕಾರಣಕ್ಕೆ ಹೆಚ್ಚಾಗ್ತಿದೆ ಆತ್ಮಹತ್ಯೆ ಪ್ರಕರಣ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ 2 ಕಾರಣಕ್ಕೆ ಹೆಚ್ಚಾಗ್ತಿದೆ ಆತ್ಮಹತ್ಯೆ ಪ್ರಕರಣ….!

ಜಗತ್ತಿನಲ್ಲಿ ಉಳಿದ ಎಲ್ಲ ದೇಶಕ್ಕಿಂತ ನಮ್ಮ ದೇಶ ಭಾರತದಲ್ಲಿ ಮದುವೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಉಳಿದ ಎಲ್ಲ ದೇಶಕ್ಕೆ ಹೋಲಿಕೆ ಮಾಡಿದ್ರೆ, ನಮ್ಮ ದೇಶದಲ್ಲಿ ವಿವಾಹ ವಿಚ್ಛೇದನಗಳು ಕಡಿಮೆ. ಈ ಮಾತನ್ನು ಕೆಲ ಅಂಕಿ ಅಂಶಗಳು ಕೂಡ ಸಾಬೀತುಪಡಿಸಿವೆ.

ಯುಎನ್ ವುಮೆನ್ಸ್ ಪ್ರೊಗ್ರೆಸ್ ಆಫ್ ದ ವರ್ಡ್ಸ್ ವುಮೆನ್ ರಿಪೋರ್ಟ್ ಅನುಸಾರ ಭಾರತದಲ್ಲಿ 45-49 ವಯಸ್ಸಿನ ಮಹಿಳೆಯರಲ್ಲಿ ಕೇವಲ 1.1 ರಷ್ಟು ಮಹಿಳೆಯರು ಮಾತ್ರ ವಿಚ್ಛೇದನಕ್ಕೆ ಒಳಗಾಗಿದ್ದಾರೆ. ಆದರೆ ವಿವಾಹ ವಿಚ್ಚೇದನಕ್ಕೆ ಹೊರತಾಗಿ ಕುಂಟುಂಬ ಕಲಹಕ್ಕೆ ನೊಂದು ಆತ್ಮಹತ್ಯೆಗೆ ಶರಣಾದವರ ಸಂಖ್ಯೆ ಹೆಚ್ಚುತ್ತಿದೆ ಎಂಬುದು ದುಃಖದ ಸಂಗತಿ.

ಅಸ್ಸಾಂ ಸ್ಪರ್ಧಿಯ ಮೇಲೆ ನಿರೂಪಕ ಮಾಡಿದ್ರಾ ಜನಾಂಗೀಯ ನಿಂದನೆ..?‌ ಶುರುವಾಗಿದೆ ಹೀಗೊಂದು ಚರ್ಚೆ

ಹೌದು, ಇತ್ತೀಚೆಗೆ ವಿವಾಹಿತರು ವಿವಾಹ ವಿಚ್ಛೇದನದ ಬದಲು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯುರೋದ ಅಂಕಿಅಂಶಗಳ ಪ್ರಕಾರ, 2016-2020 ರಲ್ಲಿ ವೈವಾಹಿಕ ಸಮಸ್ಯೆಗಳಿಂದ ಸುಮಾರು 37,591 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಹೆಚ್ಚಿದೆ.

ವರದಕ್ಷಿಣೆ ಎಂಬುದೇ ಹಲವರಿಗೆ ಉರುಳಾಗಿದೆ. ಈ ಕಾರಣಕ್ಕಾಗಿಯೇ ಸುಮಾರು 10,282 ಮಂದಿ ಸಾವನ್ನಪ್ಪುತ್ತಿದ್ದಾರೆ. ಇದಲ್ಲದೇ ಮದುವೆ ಆಗಲಿಲ್ಲ ಎಂಬ ಕಾರಣಕ್ಕೆ 10,584 ಮಂದಿ ಸಾವನ್ನಪ್ಪಿದ್ದಾರೆ. ಅಂದರೆ ಪ್ರತಿ ವರ್ಷ ವರದಕ್ಷಿಣೆಯ ಕಾರಣಕ್ಕೆ ಸುಮಾರು 2,056 ಮಂದಿ ಮತ್ತು ಮದುವೆಯಾಗಿಲ್ಲ ಎಂಬ ಕಾರಣಕ್ಕೆ 2,100 ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ವಿಷಯದಲ್ಲೂ ಮಹಿಳೆಯರೇ ಹೆಚ್ಚು ಸತ್ತಿದ್ದಾರೆ. ಕಳೆದ 5 ವರ್ಷದಲ್ಲಿ ವರದಕ್ಷಿಣೆ ಕಿರುಕುಳ ಸಹಿಸಲಾಗದೇ ಸುಮಾರು 9,385 ಮಹಿಳೆಯರು ಸುಯಿಸೈಡ್ ಮಾಡಿಕೊಂಡಿದ್ದಾರೆ ಎಂದು ಕೆಲ ರಿಪೋರ್ಟ್ ಹೇಳುತ್ತದೆ.

2016ರಿಂದ 2020 ರ ನಡುವೆ ವಿವಾಹ ಸಂಬಂಧದ ಕಾರಣದಿಂದ 21,570 ಮಹಿಳೆಯರು ಮತ್ತು 16,021 ಪುರುಷರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2020ರಲ್ಲಿ ಸುಮಾರು 7,239 ಆತ್ಮಹತ್ಯೆಗಳು ನಡೆದಿದ್ದರೆ ಅದರಲ್ಲಿ ಪ್ರತಿಶತ 26ರಷ್ಟು ಅಂದರೆ ಸುಮಾರು 2,018 ಆತ್ಮಹತ್ಯೆಗಳು ವರದಕ್ಷಿಣೆಗೆ ಸಂಬಂಧಿಸಿದೆ. ಇವರಲ್ಲಿ 1,749 ಮಹಿಳೆಯರು ಮತ್ತು 249 ಪುರುಷರಿದ್ದಾರೆ.

ಮನೆ ಹೊಂದುವ ಕನಸು ಕಂಡವರಿಗೆ ಶಾಕಿಂಗ್ ನ್ಯೂಸ್: ಮನೆಗಳ ಬೆಲೆ ಶೇಕಡ 15 ರಷ್ಟು ಹೆಚ್ಚಳ ಸಾಧ್ಯತೆ

ವಿವಾಹೇತರ ಸಂಬಂಧಗಳಿಂದಾಗ್ಯೂ ಪ್ರತಿವರ್ಷ 1100 ಆತ್ಮಹತ್ಯೆಗಳು ನಡೆಯುತ್ತವೆ. 5 ವರ್ಷದಲ್ಲಿ ಸುಮಾರು 5,737 ಸುಯಿಸೈಡ್ ಕೇಸ್ ದಾಖಲಾಗಿವೆ. ವಿಚ್ಛೇದನ, ಕೌಟುಂಬಿಕ ಕಲಹಗಳ ಹೊರತಾಗಿ ಉಳಿದ ಕಾರಣಗಳಿಗೆ 724 ಪುರುಷರು ಮತ್ತು 636 ಮಹಿಳೆಯರು ಆತ್ಮಹತ್ಯೆಗೆ ಮುಂದಾಗಿದ್ದಾರೆ. ಪುರುಷರನ್ನು ಹೋಲಿಸಿದರೆ ಮಹಿಳೆಯರ ಸಾವಿನ ಸಂಖ್ಯೆ ಪ್ರತಿಶತ 14ರಷ್ಟು ಕಡಿಮೆ ಕಂಡುಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...