ನವದೆಹಲಿ: ಲಸಿಕೆ ಅಡ್ಡಪರಿಣಾಮಗಳಿಗೆ ಉತ್ಪಾದನಾ ಕಂಪನಿಗಳೇ ಹೊಣೆಯಾಗಿದ್ದು, ಅವಘಡದ ಸಂದರ್ಭದಲ್ಲಿ ನಷ್ಟ ಪರಿಹಾರ ಪಾವತಿ ಕಡ್ಡಾಯವಾಗಿದೆ.
ಕೊರೋನಾ ಲಸಿಕೆ ನೀಡಿದ ನಂತರ ಯಾವುದೇ ಅನಾರೋಗ್ಯ ಸಮಸ್ಯೆ ಉಂಟಾದಲ್ಲಿ ಕಂಪನಿಗಳು ಹೊಣೆಗಾರರು ಎನ್ನುವ ನಿಯಮವನ್ನು ಕೇಂದ್ರ ಸರ್ಕಾರ ಲಸಿಕೆ ಖರೀದಿ ಒಪ್ಪಂದದ ವೇಳೆ ಖಚಿತಪಡಿಸಿಕೊಂಡಿದೆ ಎಂದು ಹೇಳಲಾಗಿದೆ.
ಭಾರತದಲ್ಲಿ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆ ನೀಡಿಕೆಗೆ ಅನುಮೋದನೆ ನೀಡಲಾಗಿದ್ದು, ನಾಳೆಯಿಂದ ವಿಶ್ವದಲ್ಲಿ ದೊಡ್ಡದಾದ ಲಸಿಕೆ ನೀಡಿಕೆ ಅಭಿಯಾನ ನಡೆಯಲಿದೆ. ಲಸಿಕೆ ಕುರಿತಾಗಿ ಜನಸಾಮಾನ್ಯರಲ್ಲಿ ಇರುವಂತಹ ಅನುಮಾನವನ್ನು ದೂರ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಕ್ರಮಕೈಗೊಂಡಿದೆ.
ಸುಳ್ಳು ಆರೋಪಗಳ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿದ್ದು ಇದನ್ನು ಹೋಗಲಾಡಿಸಲು ಲಸಿಕೆಯ ಅಡ್ಡಪರಿಣಾಮಗಳಿಗೆ ಉತ್ಪಾದನೆ ಕಂಪನಿಗಳಿಂದಲೇ ನಷ್ಟ ಪರಿಹಾರ ಪಾವತಿ ಕಡ್ಡಾಯವೆಂದು ಒಪ್ಪಂದದ ವೇಳೆ ಖಚಿತಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.