ಬೆಂಗಳೂರು: ಒಂದು ವಾರದ ಬಳಿಕ ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್ ಮತ್ತೆ ಓಪನ್ ಆಗಿದೆ. ಮಂತ್ರಿ ಮಾಲ್ ಬೀಗ ತೆರೆಯುವಂತೆ ಕೋರ್ಟ್ ಬಿಬಿಎಂಪಿಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಬೀಗ ತೆರೆಯಲಾಗಿದ್ದು, ಇಂದಿನಿಂದ ಮಾಲ್ ಪುನರಾರಂಭವಾಗಿದೆ.
ಮಂತ್ರಿ ಮಾಲ್ 41 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಹಲವು ಬಾರಿ ಬಿಬಿಎಂಪಿ ತೆರಿಗೆ ಅಧಿಕಾರಿಗಳು ನೋಟೀಸ್ ನೀಡಿದ್ದರೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಬಿಬಿಎಂಪಿ ಅಧಿಕಾರಿಗಳು ಮಂತ್ರಿ ಮಾಲ್ ಗೆ ಬೀಗ ಜಡಿದು ತೆರಳಿದ್ದರು.
ಇದೀಗ ಮಂತ್ರಿ ಮಾಲ್, 41 ಕೋಟಿ ತೆರಿಗೆ ಪೈಕಿ 21 ಕೋಟಿ ತೆರಿಗೆ ಹಣವನ್ನು ಜುಲೈ 31ರೊಳಗೆ ಪಾವತಿಸುವುದಾಗಿ ಕೋರ್ಟ್ ಗೆ ಮುಚ್ಚಳಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್ , ಮಾಲ್ ಬೀಗ ತೆರೆಯುವಂತೆ ಪಾಲಿಕೆಗೆ ಸೂಚಿಸಿದೆ. ಅಲ್ಲದೇ ಮಂತ್ರಿ ಮಾಲ್ ನಲ್ಲಿ 250ಕ್ಕೂ ಹೆಚ್ಚು ಮಳಿಗೆಗಳಿದ್ದು, ಅವರಿಗೆ ನಷ್ಟವುಂಟಾಗುತ್ತದೆ. ಹಲವು ಸಿಬ್ಬಂದಿಗಳು ಸಂಕಷ್ಟಕ್ಕೆ ಸಿಲುಕಿತ್ತಾರೆ. ಈ ಹಿನ್ನೆಲೆಯಲ್ಲಿ ಮಾಲ್ ಬೀಗ ತೆರೆಯಲು ಕೋರ್ಟ್ ಸೂಚಿಸಿದೆ.