ಮಂತ್ರಾಲಯ: ಮಂತ್ರಾಲಯದ ರಾಯರ ಮಠದ ಹೆಸರಿನಲ್ಲಿ ಸರಣಿ ವಂಚನೆ ನಡೆಸಲಾಗಿದೆ. ಆನ್ಲೈನ್ ನಲ್ಲಿ ಮಠದ ಪ್ರಸಾದ ನೀಡಲಾಗುವುದು ಎಂದು ಭಕ್ತರಿಂದ ಹಣ ಸಂಗ್ರಹಿಸಿ ವಂಚಿಸಲಾಗಿದೆ.
ಜೊತೆಗೆ ಕೊರೋನಾ ಬಳಿಕ ಮಠದ ಸಿಬ್ಬಂದಿ, ಅರ್ಚಕರು ಸಂಕಷ್ಟದಲ್ಲಿದ್ದಾರೆ. ಅವರ ಸಹಾಯಕ್ಕಾಗಿ ದೇಣಿಗೆ ನೀಡುವಂತೆ ರಾಯರ ಮಠದ ಹೆಸರಿನಲ್ಲಿ ನಕಲಿ ವೆಬ್ಸೈಟ್ ಐಡಿ ಸೃಷ್ಟಿಸಿ ವಂಚಿಸಲಾಗಿದೆ. ಈ ಮೂಲಕ ಅಪಾರ ಪ್ರಮಾಣದ ಹಣ ವಸೂಲಿ ಮಾಡಲಾಗಿದೆ.
ಇದರ ಬಗ್ಗೆ ಮಠದ ಇಮೇಲ್ ಗೆ ಭಕ್ತರು ಸಂದೇಶ ರವಾನಿಸಿದ್ದಾರೆ. ಭಕ್ತರು ಕಳುಹಿಸಿದ ಇಮೇಲ್ ಸಂದೇಶದಿಂದ ಪ್ರಕರಣ ಬೆಳಕಿಗೆ ಬಂದಿದೆ. ಮಂತ್ರಾಲಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ. ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಕೇಸುಗಳು ದಾಖಲಾಗಿವೆ.