
ಪ್ರೀತಿಸುತ್ತಿರುವ ಹುಡುಗಿಗೆ ಪ್ರೇಮ ಪ್ರಸ್ತಾಪ ಮಾಡುವುದು ಹೇಗೆ ಅನ್ನೋ ಬಗ್ಗೆ ಯುವಕರು ಯೋಚನಾ ಮಗ್ನದಲ್ಲಿರುತ್ತಾರೆ. ಎಲ್ಲಿ, ಯಾವ ರೀತಿ ಮಾಡಿದರೆ ಹೆಣ್ಮಕ್ಕಳಿಗೆ ಇಷ್ಟವಾಗುತ್ತದೆ ಅನ್ನೋದರ ಬಗ್ಗೆಯೇ ಚಿಂತನೆ ಮಾಡುತ್ತಾರೆ. ಹಾಗೆಯೇ ಇಲ್ಲೊಬ್ಬ ಯುವಕ ತಾನು ಪ್ರೇಮಿಸುತ್ತಿರುವ ಯುವತಿಗೆ ಬೇಸ್ ಬಾಲ್ ಪಂದ್ಯ ನಡೆಯುತ್ತಿರುವ ಮೈದಾನದಲ್ಲಿ ಪ್ರಪೋಸ್ ಮಾಡಿದ್ದಾನೆ.
ಹೌದು, ಯುವಕನೊಬ್ಬ ಬೇಸ್ ಬಾಲ್ ಪಂದ್ಯ ನಡೆಯುವ ಮೈದಾನದಲ್ಲೇ ಯುವತಿಗೆ ಪ್ರಪೋಸ್ ಮಾಡಿದ್ದಾನೆ. ಮೈದಾನದ ತುಂಬಾ ಜನಸಮೂಹವೇ ಸೇರಿತ್ತು. ಈ ವೇಳೆ ಯುವಕನೊಬ್ಬ ತನ್ನ ಮಂಡಿಯೂರಿ ಯುವತಿಗೆ ಪ್ರಪೋಸ್ ಮಾಡಿದ್ದಾನೆ. ಆದರೆ ಜನಸಮೂಹ ಸೇರಿದ್ದರಿಂದ ಗೊಂದಲಕ್ಕೊಳಗಾದ ಯುವತಿ ಇಲ್ಲ ಎನ್ನುವಂತೆ ತನ್ನ ತಲೆಯನ್ನಾಡಿಸಿ ವೇದಿಕೆಯಿಂದ ಕೆಳಗೆ ಇಳಿದಿದ್ದಾಳೆ. ಇದರಿಂದ ಯುವಕನಿಗೆ ಭಾರಿ ನಿರಾಶೆಯಾದಂತಾಗಿದೆ.
BREAKING: ‘ಕಟೀಲ್ ಆಡಿಯೋ’ ತನಿಖೆಗೆ ಬಿಜೆಪಿ ಶಾಸಕರಿಂದಲೇ ದೂರು
ಇನ್ನು ಪ್ರೇಕ್ಷಕರು ಕೂಡ ಬೇಸ್ ಬಾಲ್ ತಂಡದ ಬದಲು ಯುವಕ-ಯುವತಿಯನ್ನು ಹುರಿದುಂಬಿಸಿದ್ದಾರೆ. ಆದರೆ ಆಕೆ ಜನಸಮೂಹವನ್ನು ಚದುರಿಸಿ, ತಾನು ಹೊರಡಲು ಜಾಗ ಮಾಡಿಕೊಡಿ ಅಂತಾ ಹೇಳುತ್ತಾ ಅಲ್ಲಿಂದ ತೆರಳಲು ಪ್ರಯತ್ನಿಸಿದ್ದಾಳೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಈ ಮುಜುಗರದ ಕ್ಷಣದ ಬಗ್ಗೆ ಮಾತನಾಡಿರುವ ನೆಟ್ಟಿಗರು, ಸಾರ್ವಜನಿಕವಾಗಿ ಪ್ರೇಮ ವಿಚಾರವನ್ನು ಎಂದಿಗೂ ಪ್ರಸ್ತಾಪಿಸಬೇಡಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
https://www.instagram.com/p/CRXpTlgpQDT/?utm_source=ig_web_copy_link