
ಪ್ರೀತಿ ನಿವೇದನೆಗಾಗಿ ಜನರು ಅನೇಕ ತಯಾರಿ ನಡೆಸುತ್ತಾರೆ. ಆ ಕ್ಷಣ ಸುಂದರವಾಗಿರಲೆಂದು ಎಲ್ಲರೂ ಬಯಸ್ತಾರೆ. ಆದ್ರೆ ಆಸ್ಟ್ರೇಲಿಯಾದಲ್ಲಿ ವಾಸಿಸುವ ವ್ಯಕ್ತಿಯೊಬ್ಬ ಪ್ರೇಮಿಗೆ ಸೃಜನಶೀಲವಾಗಿ ಪ್ರೇಮ ನಿವೇದನೆ ಮಾಡಲು ಮುಂದಾಗಿದ್ದ. ಆದ್ರೆ ಆತನ ಸೃಜನಶೀಲತೆ ಆಸ್ಪತ್ರೆ ಸೇರುವಂತೆ ಮಾಡಿದೆ.
ಟಿವಿ ಕಾರ್ಯಕ್ರಮವೊಂದರಲ್ಲಿ ವ್ಯಕ್ತಿ, ತನ್ನ ಕಥೆಯನ್ನು ಹೇಳಿದ್ದಾಳೆ. ಪ್ರೇಮಿ ಪ್ರಪೋಸ್ ಮಾಡ್ತಾನೆ ಎಂದು ಆಕೆಗೆ ಗೊತ್ತಿರಲಿಲ್ಲವಂತೆ. ಆ ದಿನ ಬೆಳಿಗ್ಗೆ ವಿಷ್ಯ ಗೊತ್ತಾಗಿತ್ತಂತೆ. ಇಬ್ಬರೂ ಒಂದು ಕಡೆ ಸೇರಿದ್ದರಂತೆ. ಪ್ರೇಮಿಗೆ ಉಂಗುರ ಖರೀದಿಸಿದ ವ್ಯಕ್ತಿ, ಅದನ್ನು ಕೈನಿಂದ ನೀಡಲು ಮುಂದಾಗಿರಲಿಲ್ಲ. ಖಾಸಗಿ ಅಂಗದಲ್ಲಿ ಉಂಗುರ ಇಟ್ಟಿದ್ದನಂತೆ. ಪ್ರೇಮ ನಿವೇದನೆ ಮಾಡುವಾಗ ಖಾಸಗಿ ಅಂಗ ತೆಗೆದಾಗ, ಉಂಗುರ ಬರುತ್ತದೆ. ಆ ಮೂಲಕ ಪ್ರೇಮ ನಿವೇದನೆ ಮಾಡಬೇಕು ಎಂದುಕೊಂಡಿದ್ದನಂತೆ. ಆದ್ರೆ ಹುಡುಗಿ ಸಿಗ್ತಿದ್ದಂತೆ ಪ್ಯಾಂಟ್ ಜಿಪ್ ತೆಗೆದಿದ್ದಾನೆ. ದುರಾದೃಷ್ಟಕ್ಕೆ ಪ್ಯಾಟ್ ಜಿಪ್ ಗೆ ಖಾಸಗಿ ಅಂಗದ ಚರ್ಮ ಸಿಕ್ಕಿಬಿದ್ದಿದೆ.
ವ್ಯಕ್ತಿ, ನೋವಿನಿಂದ ಕಿರುಚಿಕೊಂಡಿದ್ದಾನೆ. ಇಬ್ಬರೂ ಅದನ್ನು ತೆಗೆಯುವ ಪ್ರಯತ್ನ ನಡೆಸಿದ್ದಾರೆ. ಆದ್ರೆ ಸಾಧ್ಯವಾಗದ ಕಾರಣ, ಆಸ್ಪತ್ರೆಗೆ ಹೋಗಿದ್ದಾರೆ. ಆಸ್ಪತ್ರೆಯಲ್ಲಿ ಪ್ರೀತಿ ವಿಷ್ಯವನ್ನು ಮಾತನಾಡಿಕೊಂಡಿದ್ದಾರೆ.
ಬಾಯ್ ಫ್ರೆಂಡ್ ಮಾಡಿದ ಕೆಲಸಕ್ಕೆ ಒಂದು ರಾತ್ರಿ ಆಸ್ಪತ್ರೆಯಲ್ಲೇ ಇಬ್ಬರು ಕಳೆದಿದ್ದಾರೆ. ಬಾಯ್ ಫ್ರೆಂಡ್ ಐಡಿಯಾ ಕೆಟ್ಟದಾಗಿತ್ತು. ನನಗೆ ಅದು ಇಷ್ಟವಾಗಿರಲಿಲ್ಲವೆಂದು ಹುಡುಗಿ, ಟಿವಿ ಶೋನಲ್ಲಿ ಹೇಳಿದ್ದಾಳೆ.