ಅಜ್ಜ – ಅಜ್ಜಿ ಬಳಿ ಬೆಳೆಯುವ ಅವಕಾಶವಿದ್ದರೆ ಅಂತಹ ಮಕ್ಕಳು ಅದೃಷ್ಟವಂತರು. ಅವರು ನೆನಪುಗಳಿಂದ ತುಂಬಿದ ನಿಧಿಯನ್ನು ನಮಗೆ ಬಿಟ್ಟುಕೊಟ್ಟು ಹೋಗುತ್ತಾರೆ. ಕೆಲವರು ಛಾಯಾಚಿತ್ರಗಳ ಮೂಲಕ ಆ ನೆನಪುಗಳನ್ನು ಸಂರಕ್ಷಿಸಿದರೆ, ಈ ಟ್ವಿಟರ್ ಬಳಕೆದಾರರು ತಮ್ಮ ಅಜ್ಜ – ಅಜ್ಜಿ ಮೇಲಿನ ಪ್ರೀತಿಯನ್ನು ತೋರಿಸಲು ವಿಶೇಷ ಮಾರ್ಗವನ್ನು ಆರಿಸಿಕೊಂಡಿದ್ದಾರೆ.
@ಪೆಟ್ಟಿಪಾರ್ತಿ, ತಮ್ಮ ಅಜ್ಜ – ಅಜ್ಜಿ ನೆನಪಿಗಾಗಿ ಹಾಕಿಸಿಕೊಂಡಿರುವ ಹಚ್ಚೆಗಳನ್ನು ಒಳಗೊಂಡಂತೆ ಟ್ವೀಟ್ ಅನ್ನು ಹಂಚಿಕೊಂಡಿದ್ದಾರೆ. ಅಜ್ಜನ ಚಿತ್ರ ಮತ್ತು ಅಜ್ಜಿ ಮಾಡಿಕೊಡುತ್ತಿದ್ದ ಚಹಾದ ಕಪ್ನ ಹಚ್ಚೆ ಹಾಕಿಸಿಕೊಂಡಿದ್ದಾರೆ. “ಕಳೆದ ವರ್ಷ, 9 ತಿಂಗಳೊಳಗೆ ನಾನು ನನ್ನ ಅಜ್ಜಿ ಮತ್ತು ಅಜ್ಜನನ್ನು ಕಳೆದುಕೊಂಡೆ. ಇಂದು, ನಾನು ಅವರನ್ನು ನೆನಪಿಟ್ಟುಕೊಳ್ಳಲು ಬಯಸುವ ಮಾರ್ಗಗಳನ್ನು ಶಾಶ್ವತಗೊಳಿಸಿದ್ದೇನೆ” ಎಂದಿದ್ದಾರೆ.
ಪೋಸ್ಟ್ ಅನ್ನು 63 ಸಾವಿರ ಬಾರಿ ವೀಕ್ಷಿಸಲಾಗಿದೆ ಮತ್ತು ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಹೊಂದಿದೆ. ಮನುಷ್ಯನ ಚಿಂತನಶೀಲ ಮಾರ್ಗಕ್ಕೆ ಜನರು ಫಿದಾ ಆಗಿದ್ದಾರೆ. ಅನೇಕರು ತಮ್ಮ ಅಜ್ಜಿಯರೊಂದಿಗೆ ಹಂಚಿಕೊಂಡ ನೆನಪುಗಳ ಬಗ್ಗೆ ಮಾತನಾಡಿದ್ದಾರೆ.