ತಮ್ಮ ಮಕ್ಕಳು ಮೊದಲ ಹೆಜ್ಜೆ ಹಾಕುವುದರಿಂದ ಹಿಡಿದು ಮೊದಲ ಸಂಬಳದಲ್ಲಿ ತಮಗೆ ಉಡುಗೊರೆ ತಂದು ಕೊಡುವವರೆಗೂ ಪ್ರತಿಯೊಂದು ಕ್ಷಣವನ್ನೂ ಆಸ್ವಾದಿಸುತ್ತಾರೆ ಹೆತ್ತವರು.
ಹೊಲಿಗೆ ತರಗತಿಗೆ ಸೇರಿದ ತನ್ನ ಪುತ್ರ ಖುದ್ದು ತಾನೇ ಹೊಲೆದ ಅಂಗಿಯೊಂದನ್ನು ತನಗೆ ಉಡುಗೊರೆ ನೀಡಿದ್ದರಿಂದ ಆರನ್ ಗೋವೀ ಭಾವುಕರಾಗಿದ್ದಾರೆ. ಪುತ್ರ ಸ್ಯಾಮ್‌ನ ಈ ಪ್ರತಿಭೆಯಿಂದ ತಂದೆಗೆ ಭಾರೀ ಸಂತಸವಾಗಿದೆ.
ತನ್ನ ಮಗನ ಪರಿಶ್ರಮದ ಫಲವನ್ನು ಕಂಡ ತಂದೆಯ ಪ್ರತಿಕ್ರಿಯೆ ತೋರುವ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಿಂದ ಭಾವುಕ ಕಾಮೆಂಟ್‌ಗಳ ಸುರಿಮಳೆಯನ್ನೇ ಕಂಡಿದೆ.
ಅಂಗಿ ಹೊಲೆಯುವ ತನ್ನ ಅನುಭವವನ್ನು ಒಂದೊಂದಾಗಿ ತಂದೆಗೆ ವಿವರಿಸುತ್ತಾ ಸಾಗುವ ಸ್ಯಾಮ್‌ನ ಉತ್ಸಾಹವನ್ನು ನೋಡುವುದೇ ಚಂದ.
https://www.youtube.com/watch?v=rqnoK7T6b3A