alex Certify VIDEO | ಪೊಲೀಸರನ್ನೇ ಬೆಚ್ಚಿಬೀಳಿಸಿತು ‘ಜುಗಾಡ್’ ಬೈಕ್ ; ಸವಾರನ ಐಡಿಯಾಗೆ ಬಹುಪರಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

VIDEO | ಪೊಲೀಸರನ್ನೇ ಬೆಚ್ಚಿಬೀಳಿಸಿತು ‘ಜುಗಾಡ್’ ಬೈಕ್ ; ಸವಾರನ ಐಡಿಯಾಗೆ ಬಹುಪರಾಕ್

Watch: Man's Innovative Hybrid Bike Leaves Policemen Shocked

ಅನೇಕ ಸೃಜನಶೀಲ ವಿಡಿಯೋಗಳು ಆಗಾಗ್ಗೆ ಇಂಟರ್ನೆಟ್ ನಲ್ಲಿ ಕಾಣಿಸಿಕೊಂಡು ಗಮನ ಸೆಳೆಯುತ್ತವೆ. ಜುಗಾಡ್ ಐಡಿಯಾಗಳಿಗಂತೂ ದೇಶದಲ್ಲಿ ಬರವಿಲ್ಲ. ಇಂತಹ ಜುಗಾಡ್ ವಿಡಿಯೋವೊಂದು ನೆಟ್ಟಿಗರಿಗೆ ಮೋಜು ನೀಡಿದೆ. ಇರುವುದಲ್ಲೇ ಖುಷಿಪಡುವ ಅದ್ಭುತ ಪ್ರತಿಭೆ ಕಂಡು ಪ್ರಶಂಶಿಸಿದ್ದಾರೆ. ಆ ಪ್ರತಿಭೆಗೆ ಪೊಲೀಸರು ಕೂಡ ಬೆಕ್ಕಸ ಬೆರಗಾಗಿದ್ದಾರೆ.

ವೈರಲ್ ವೀಡಿಯೊದಲ್ಲಿ ವ್ಯಕ್ತಿಯೊಬ್ಬ ಬುಲೆಟ್ ಬೈಕ್ ಚಲಾಯಿಸಿಕೊಂಡು ಬರುತ್ತಿರುತ್ತಾನೆ. ಹೆಲ್ಮೆಟ್ ಧರಿಸದೇ ಇದ್ದುದರಿಂದ ಚಲನ್ ನೀಡಲು ಪೊಲೀಸರು ಬೈಕ್ ತಡೆದು ಬೈಕ್ ಕೀ ಪಡೆದುಕೊಳ್ಳುತ್ತಾರೆ. ನಂತರ ಬೈಕ್ ಅನ್ನು ಸೂಕ್ಮ್ನವಾಗಿ ಗಮನಿಸಿದಾಗ ಅದು ನಿಜಕ್ಕೂ ಬೈಕ್ ಆಗಿರಲಿಲ್ಲ, ಬದಲಾಗಿ ಅದು ಸೈಕಲ್ ಆಗಿತ್ತು. ಸೈಕಲ್ ಅನ್ನು ಬುಲೆಟ್ ಬೈಕ್ ನಂತೆ ಕಾಣುವ ರೀತಿ ಬದಲಾಯಿಸಲಾಗಿತ್ತು. ಇದಕ್ಕೆ ದಂಡದ ಚಲನ್ ನೀಡಲಾಗದೇ ಪೊಲೀಸರು ಬಿಟ್ಟು ಕಳಿಸುತ್ತಾರೆ. ನಂತರ ಸವಾರ ಸೈಕರ್ ನ ಪೆಡಲು ತುಳಿಯುತ್ತಾ ಮುಂದೆ ಸಾಗುತ್ತಾನೆ.

ಈ ವಿಡಿಯೋ ನೋಡಿದ ನೆಟ್ಟಿಗರು ಪೊಲೀಸರ ಪ್ರತಿಕ್ರಿಯೆಯನ್ನು ತಮಾಷೆ ಮಾಡಿದ್ರೆ, ಬೈಕ್ ಐಡಿಯಾ ಸೂಪರ್ ಆಗಿದೆ ಎಂದಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...