ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನವನ್ನು ಸೆಳೆಯುವ ಹಲವು ಫೋಟೋ, ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತದೆ. ಇದೀಗ ವೈರಲ್ ಆಗಿರೋ ವಿಡಿಯೋ ನೋಡಿದ್ರೆ ಖಂಡಿತಾ ನಿಮಗೆ ನಗು ತರಿಸದೆ ಇರದು.
ಹೌದು, ಸಾಮಾನ್ಯವಾಗಿ ಬಸ್, ಮೆಟ್ರೋ ಮುಂತಾದ ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣಿಸುವಾಗ ಸೀಟು ಸಿಗದೆ ಇದ್ದರೆ ನಿಂತುಕೊಂಡೇ ಪ್ರಯಾಣಿಸಬೇಕಾಗುತ್ತದೆ. ಹೀಗೆಯೇ ಇಲ್ಲೊಬ್ಬ ವ್ಯಕ್ತಿ ಸೀಟಿಗಾಗಿ ಮಾಡಿದ ಉಪಾಯ ಖಂಡಿತ ನಿಮಗೆ ನಗು ತರಿಸುತ್ತದೆ. ಟ್ವಿಟರ್ ನಲ್ಲಿ ವೈರಲ್ ಆಗಿರೋ ಈ ವಿಡಿಯೋದಲ್ಲಿ ಆಸನಕ್ಕಾಗಿ ಜಾಣ್ಮೆಯಿಂದ ಉಪಾಯ ಮಾಡಿ ಸೀಟು ಗಿಟ್ಟಿಸಿಕೊಂಡಿದ್ದಾನೆ.
ಮೆಟ್ರೋದಲ್ಲಿ ನಿಂತಿರುವ ಪ್ರಯಾಣಿಕರ ಮಧ್ಯೆ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ವಾಂತಿ ಮಾಡುವವರಂತೆ ವರ್ತಿಸಲು ಪ್ರಾರಂಭಿಸುತ್ತಾನೆ. ಇದರಿಂದ ಆತ ಮುಂಭಾಗದಲ್ಲಿ ಕುಳಿತಿದ್ದ ಇತರ ಪ್ರಯಾಣಿಕರು ಗಲಿಬಿಲಿಗೊಂಡು ಸೀಟಿನಿಂದ ಎದ್ದು ದೂರ ಹೋಗಿದ್ದಾರೆ. ಮೆಟ್ರೋದ ಎರಡೂ ಬದಿಯ ಪ್ರಯಾಣಿಕರು ಎದ್ದು ದೂರ ಹೋಗುತ್ತಿದ್ದಂತೆ, ತನಗೇನೂ ಆಗೇ ಇಲ್ಲವೆಂಬಂತೆ ಖಾಲಿಯಿದ್ದ ಸೀಟಿನಲ್ಲಿ ಕುಳಿತಿದ್ದಾನೆ.
ಈ ವೈರಲ್ ವಿಡಿಯೋ ಭಾರತದ್ದು ಅಲ್ಲ ಬೇರೆ ದೇಶದ್ದಾಗಿದೆ. ಮೆಟ್ರೋದ ಪರಿಸ್ಥಿತಿ ಮಾತ್ರ ಭಾರತದಂತೆಯೇ ಇದೆ. ಬಹುತೇಕ ಎಲ್ಲಾ ದೇಶಗಳಲ್ಲಿ, ಪೀಕ್ ಅವರ್ಗಳಲ್ಲಿ ಮೆಟ್ರೋದಲ್ಲಿ ಸೀಟು ಸಿಗುವುದು ಕಷ್ಟ. ಭಾರತದ ಮೆಟ್ರೋ ನಗರಗಳಲ್ಲಿ, ನಿಲ್ಲಲು ಸ್ಥಳ ಸಿಕ್ರೆ ಅದೃಷ್ಟ ಎಂಬಂತಾಗಿದೆ.
https://twitter.com/_IDVL/status/1648273474186510340?ref_src=twsrc%5Etfw%7Ctwcamp%5Etweetembed%7Ctwterm%5E1648273474186510340%7Ctwgr%5E9cda79bf4cc4da15a1b3b6c2e92e070e31f3005d%7Ctwcon%5Es1_&ref_url=https%3A%2F%2Fwww.news18.com%2Fbuzz%2Fwatch-mans-hilarious-tactic-to-get-a-seat-in-crowded-metro-is-viral-7594939.html