ಫುಟ್ಬಾಲ್ ಪಂದ್ಯಗಳ ಅಭಿಮಾನಿಗಳು ತಂತಮ್ಮ ತಂಡಗಳನ್ನು ಬೆಂಬಲಿಸುವ ವಿಚಾರದಲ್ಲಿ ಆಳವಾದ ಭಾವನಾತ್ಮಕತೆಯನ್ನು ಹೊಂದಿರುವುದು ಹೊಸ ವಿಚಾರವೇನಲ್ಲ. ಅದರಲ್ಲೂ ಮಕ್ಕಳಲ್ಲಿ ತಮ್ಮ ಫೇವರಿಟ್ ತಂಡಗಳ ಮೇಲೆ ಭಾರೀ ಪ್ರೀತಿ ಇರುತ್ತದೆ.
ಯೂರೋ 2020ರ ಇಂಗ್ಲೆಂಡ್ ಹಾಗೂ ಜರ್ಮನಿ ನಡುವಿನ ಪಂದ್ಯದಲ್ಲಿ ಆಂಗ್ಲರು ಜಯಿಸಿದ್ದು, ಇಂಗ್ಲಿಷ್ ಅಭಿಮಾನಿಗಳೆಲ್ಲಾ ಭಾರೀ ಖುಷಿಯಲ್ಲಿದ್ದರೆ ಜರ್ಮನ್ ಅಭಿಮಾನಿಗಳು ಬಿಯರ್ ಪಿಂಟ್‌ಗಳನ್ನು ಸೇವಿಸಿ ತಮ್ಮ ನಿರಾಸೆ ಇಳಿಸಿಕೊಂಡಿದ್ದಾರೆ.
ರಿಲಯನ್ಸ್ ಜಿಯೋ ಗ್ರಾಹಕರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್
ಲಂಡನ್‌ನ ವೆಂಬ್ಲಿ ಕ್ರೀಡಾಂಗಣದಲ್ಲಿ ಪಂದ್ಯ ಮುಗಿಯುತ್ತಲೇ ಭಾರೀ ಬೇಸರದಲ್ಲಿದ್ದ ಜರ್ಮನಿ ಅಭಿಮಾನಿಗಳ ಕಣ್ಣಲ್ಲಿ ನೀರು ಬರುತ್ತಿತ್ತು. ಇವರ ಪೈಕಿ ಪುಟಾಣಿ ಬಾಲೆಯೊಬ್ಬಳು ತನ್ನ ಮೆಚ್ಚಿನ ತಂಡ ಸೋಲುತ್ತಲೇ ತನಗಾದ ನೋವನ್ನು ತಾಳಲಾರದೇ, ಅಪ್ಪನ ಮಡಿಲಿನಲ್ಲಿ ಕಣ್ಣೀರಿಟ್ಟ ಆಕೆ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಂಗ್ಲೆಂಡ್ ಹಾಗೂ ಜರ್ಮನಿ ನಡುವಿನ ವಿಶ್ವ ಮಹಾಯುದ್ಧ ಕಾಲದ ವೈರತ್ವ ಫುಟ್ಬಾಲ್ ಕ್ರೀಡಾಂಗಣಗಳಲ್ಲೂ ಸಹ ಢಾಳವಾಗೇ ಕಾಣುತ್ತದೆ. ಅದರಲ್ಲೂ ಅಂತರ್ಜಾಲದ ಯುಗದಲ್ಲಿ ಅಭಿಮಾನಿಗಳ ವರ್ಚುವಲ್ ಸಮರ ತಾರಕ್ಕೇರುತ್ತದೆ. ಇತ್ತಂಡಗಳ ಅಭಿಮಾನಿಗಳ ನಡುವಿನ ವಾಕ್ಸಮರವು ಈ ಪುಟಾಣಿ ಬಾಲಕಿಯನ್ನೂ ಬಿಟ್ಟಿಲ್ಲ.
ಆಘಾತಕಾರಿಯಾಗಿದೆ ಶಾಲೆ ತಪ್ಪಿಸಿಕೊಳ್ಳಲು ಈ ಮಕ್ಕಳು ಮಾಡ್ತಿರುವ ಪ್ಲಾನ್
ಬ್ರಿಟಿಷ್ ತಂಡದ ಅನೇಕ ಅಭಿಮಾನಿಗಳು ಪುಟ್ಟ ಬಾಲಕಿಯನ್ನೂ ಸಹ ಟ್ರೋಲ್ ಮಾಡಿದ್ದು, “ಹೇ ಪುಟಾಣಿ ನಾಜ಼ಿ, ನೀನು ಹೀಗೇ ಅಳಬೇಕು,” ಎನ್ನುವ ಅರ್ಥದ ’ಸ್ಯಾಡಿಸ್ಟ್’ ಕಾಮೆಂಟ್‌ಗಳನ್ನು ಆಕೆಯ ಚಿತ್ರಕ್ಕೆ ಹಾಕಿದ್ದರು.
ಇಂಥ ವಿಪರೀತ ಕಾಮೆಂಟ್‌ಗಳಿಂದ ಮನನೊಂದ ವೇಲ್ಸ್‌ನ ಜೋಯೆಲ್ ಹ್ಯೂಸ್ ಹೆಸರಿನ ಮಹಿಳೆಯೊಬ್ಬರು ಪುಟಾಣಿ ಬಾಲಕಿಗೆ ದೇಣಿಗೆ ಸಂಗ್ರಹಿಸಲು ಮುಂದಾಗಿದ್ದಾರೆ. ಜಸ್ಟ್ ಗಿವಿಂಗ್ ಪುಟದಲ್ಲಿ ಇದಕ್ಕಾಗಿ ಪ್ಲಾಟ್‌ಫಾರಂ ಒಂದನ್ನು ಸೃಷ್ಟಿಸಿದ ಹ್ಯೂಸ್, ಈ ಬಾಲೆಗಾಗಿ 500 ಪೌಂಡ್‌ಗಳನ್ನು ಸಂಗ್ರಹಿಸಬೇಕಿದ್ದು, ತಮ್ಮ ಕೈಲಾದಷ್ಟು ದೇಣಿಗೆ ನೀಡಿ ಎಂದು ವಿನಂತಿಸಿಕೊಂಡಿದ್ದರು.
ಅಚ್ಚರಿಗೊಳ್ಳುವ ರೀತಿಯಲ್ಲಿ ಬಾಲೆಗೆ ಸ್ಪಂದಿಸಿರುವ ಬ್ರಿಟನ್‌ನ ಮಂದಿ, ಫಂಡ್‌ರೈಸರ್ ಮೂಲಕ 25,606 ಪೌಂಡ್‌ಗಳನ್ನು ಬಾಲಕಿಗಾಗಿ ಸಂಗ್ರಹಿಸಿದ್ದಾರೆ.