ವಿಶ್ವದಲ್ಲಿ ಆರೋಗ್ಯ ಸಮಸ್ಯೆಗಳು ದಿನೇದಿನೆ ಹೆಚ್ಚುತ್ತಿವೆ. ಕೊರೊನಾ ಸಾಂಕ್ರಾಮಿಕ ಮಹಾಮಾರಿಯ ಆರ್ಭಟದ ನಡುವೆ ಯಾರಿಗೆ ಯಾವ ರೀತಿ ಅನಾರೋಗ್ಯ ಉಲ್ಬಣಿಸುತ್ತಿದೆ ಎನ್ನುವುದನ್ನು ಪತ್ತೆ ಮಾಡುವುದು ವೈದ್ಯಲೋಕಕ್ಕೆ ಸವಾಲಾಗಿ ಕಾಡುತ್ತಿದೆ. ವಂಶವಾಹಿ ಕಾಯಿಲೆಗಳು ಕೂಡ ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಅಂಥದ್ದರಲ್ಲಿ ವಿಶ್ವದಲ್ಲೇ ಅತ್ಯಂತ ಅಪರೂಪವಾದ ಮತ್ತು ಕೇವಲ 700 ಜನರಿಗೆ ಮಾತ್ರ ಬಾಧಿಸಿರುವ ಎಫ್ಒಪಿ ಎಂಬ ಕಾಯಿಲೆಗೆ 29 ವರ್ಷದ ಜೋಯ್ ಸೂಛ್ ತುತ್ತಾಗಿದ್ದಾನೆ.
ಫಿಬ್ರೊಡಿಸ್ಪ್ಲೇಸಿಯಾ ಒಸ್ಸಿಫೀಕಾನ್ಸ್ ಪ್ರೊಗ್ರೆಸ್ಸಿವಾ (ಎಫ್ಒಪಿ) ಅಥವಾ ಸ್ಟೋನ್ಮ್ಯಾನ್ ಸಿಂಡ್ರೋಮ್ ಎನ್ನುವುದು ಮನುಷ್ಯನ ದೇಹದಲ್ಲಿನ ಮಾಂಸಖಂಡಗಳನ್ನು ನಿಧಾನವಾಗಿ ಮೂಳೆಗಳಂತೆ ಗಟ್ಟಿಯಾಗಿಸುತ್ತಾ ಹೋಗುತ್ತದೆ. ತಮ್ಮ ಎಲಾಸ್ಟಿಸಿಟಿಯನ್ನು ಕಳೆದುಕೊಳ್ಳುವ ಮಾಂಸಗಳು ಗಟ್ಟಿಗೊಳ್ಳುತ್ತವೆ. ಇದರಿಂದ ಬಾಧಿತನು ದೇಹದ ಅಂಗಾಂಗಗಳ ಚಲನೆಯನ್ನು ಕಳೆದುಕೊಂಡು, ಕಲ್ಲಿನಂತೆ ಆಗಿ ಹೋಗುತ್ತಾನೆ.
BBL ನಲ್ಲಿ ಕೊರೋನಾ ಆರ್ಭಟ: ಮೆಲ್ಬೋರ್ನ್ ಸ್ಟಾರ್ಸ್ ನಾಯಕ ಗ್ಲೆನ್ ಮ್ಯಾಕ್ಸ್ ವೆಲ್ ಸೇರಿ ತಂಡದ 20 ಮಂದಿಗೆ ಕೋವಿಡ್
ಕಳೆದ ಮೂರು ವರ್ಷಗಳಿಂದ ಜೋಯ್ಗೆ ಎಫ್ಒಪಿ ಕಾಡುತ್ತಿದೆ. ಆತನ ದೇಹದ 95% ಚಲನೆಗಳನ್ನು ಕಳೆದುಕೊಂಡಿದ್ದಾನೆ. ಎಫ್ಒಪಿ ಬಗ್ಗೆ ಜನರಿಗೆ ಶಿಕ್ಷ ಣ ನೀಡಲು ಸೂಛ್ ಯೂಟ್ಯೂಬ್ನಲ್ಲಿ ಹಾಕಿರುವ ವಿಡಿಯೊವೊಂದು ಬಹಳ ವೈರಲ್ ಆಗಿದೆ. ಚಿಕ್ಕವಯಸ್ಸಿನಲ್ಲೇ ಇಂಥ ಅಪರೂಪದ ಕಾಯಿಲೆಗೆ ತುತ್ತಾಗಿ ತಾನು ಅನುಭವಿಸಿದ ಕೀಳರಿಮೆ ಸಂಕಷ್ಟಗಳನ್ನು ಕೂಡ ಸೂಛ್ ವಿಡಿಯೊದಲ್ಲಿ ಹಂಚಿಕೊಂಡಿದ್ದಾನೆ. ನನ್ನ ದೇಹವೇ ಲಾಕ್ ಆಗಿದೆ ಎಂದು ಹೇಳುತ್ತಾನೆ ಸೂಛ್, ಆತನ ಕಥೆಯನ್ನು ಒಮ್ಮೆ ಕೇಳಿ ನೋಡಿ.