ಇತ್ತೀಚೆಗೆ ವಾಟ್ಸಾಪ್ ಸ್ಕ್ಯಾಮ್‌ಗಳು ಹೆಚ್ಚು ಪ್ರಚಲಿತದಲ್ಲಿವೆ. ಹಲವಾರು ಸ್ಕ್ಯಾಮರ್‌ಗಳು ಸೂಕ್ಷ್ಮ ಖಾತೆಯ ವಿವರಗಳನ್ನು ಹೊರತೆಗೆಯಲು ಮತ್ತು ವ್ಯಕ್ತಿಗಳನ್ನು ವಂಚಿಸಲು ಪ್ರಯತ್ನಿಸುತ್ತಾರೆ. ಇದೀಗ ಇಂಥದ್ದೇ ವಾಟ್ಸಾಪ್ ಚಾಟ್ ನಲ್ಲಿ ಬಳಕೆದಾರರೊಬ್ಬರು ವಂಚಕರಿಗೆ ಪ್ರೀತಿ, ಶಾಂತಿಯ ಬಗ್ಗೆ ಚರ್ಚಿಸಿದ್ದಾರೆ. ಸದ್ಯ ಈ ಚಾಟ್ ಫೋಟೋ ನೆಟ್ಟಿಗರ ಮನಗೆದ್ದಿದೆ.
ಹಣವು ತುಂಬಾ ಹೆಚ್ಚಾಗಿದೆ. ಪ್ರೀತಿ ಬೇಕು ಅಂತಾ ಮೋಸಗಾರನೊಂದಿಗೆ ಪ್ರೀತಿ, ಜಗತ್ತು, ಶಾಂತಿ ಮತ್ತು ಎಲ್ಲದರ ಬಗ್ಗೆ ಹೃದಯದಿಂದ ಸಂಭಾಷಣೆ ನಡೆಸಿದೆ ಎಂದು ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಚೆಟ್ಟಿ ಅರುಣ್ ಎಂಬುವವರು ಹಂಚಿಕೊಂಡಿದ್ದಾರೆ. ಸ್ಕ್ಯಾಮರ್‌ನೊಂದಿಗಿನ ನಡೆಸಿದ ಸಂಭಾಷಣೆಯ ಸ್ನ್ಯಾಪ್‌ಶಾಟ್‌ಗಳನ್ನು ಸಹ ಅವರು ಹಂಚಿಕೊಂಡಿದ್ದಾರೆ.
ಲಾವಣ್ಯ ಎಂಬಾಕೆಯು ಚೆಟ್ಟಿಅರುಣ್ ಎಂಬುವವರಿಗೆ ಮೆಸೇಜ್ ಮಾಡಿ ಕಂಪನಿ ಮತ್ತು ಕೆಲಸದ ವಿವರಣೆಯ ಬಗ್ಗೆ ತಿಳಿಸಿದ್ದಾಳೆ. ಲಿಂಕ್ಡ್ ಇನ್ ಮತ್ತು ನೌಕರಿ.ಕಾಮ್ ನಿಂದ ಮೊಬೈಲ್ ಸಂಖ್ಯೆಯನ್ನು ಪಡೆದಿದ್ದಾಗಿ ಹೇಳಿದ್ದಾಳೆ. ಇದಕ್ಕೆ ಪ್ರತಿಕ್ರಿಯೆ ನೀಡಿದ X ಪ್ಲಾಟ್ ಫಾರ್ಮ್ ಬಳಕೆದಾರ, ಹಾಯ್ ಲಾವಣ್ಯ, ನಿಮ್ಮ ಹೆಸರು ಸುಂದರವಾಗಿದೆ. ಇದರ ಅರ್ಥವೇನು ಎಂದು ಕೇಳಿದ್ದಾರೆ.
ಇದಕ್ಕೆ ಧನ್ಯವಾದ ತಿಳಿಸಿದ ಮಹಿಳೆ, ಮತ್ತೆ ಕೆಲಸದ ವಿವರಗಳ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದಾಳೆ. ಈ ವೇಳೆ ಉತ್ತರಿಸಿದ X ಪ್ಲಾಟ್ ಫಾರ್ಮ್ ಬಳಕೆದಾರ ಚೆಟ್ಟಿ ಅರುಣ್, ತನ್ನ ಬಳಿ ಸಾಕಷ್ಟು ಹಣವಿದೆ. ತಾನು ಪ್ರೀತಿಯ ಹುಡುಕಾಟದಲ್ಲಿದ್ದೇನೆ. ಹೀಗಾಗಿ ಪ್ರೀತಿಗಾಗಿ ಯಾವುದೇ ಕಾರ್ಯಕ್ರಮಗಳಿದ್ದರೆ, ಅದರಲ್ಲಿ ಆಸಕ್ತಿ ವಹಿಸುವುದಾಗಿ ತಿಳಿಸಿದ್ದಾರೆ.
ಪ್ರೀತಿಗೆ ಯಾವುದೇ ಕಾರ್ಯಕ್ರಮ ಇಲ್ಲ. ಇದು ವರ್ಕಿಂಗ್ ಪ್ರೋಗ್ರಾಮ್ ಎಂದು ಆಕೆ ಹೇಳಿದ್ದಾಳೆ. ಜಗತ್ತಿನಲ್ಲಿ ಪ್ರೀತಿ ಇಲ್ಲ. ಜನರು ಎಲ್ಲೆಡೆ ಜಗಳವಾಡುತ್ತಿದ್ದಾರೆ ಅಂತಾ ಚೆಟ್ಟಿ ಅರುಣ್ ಹೇಳಿದ್ದಾರೆ. ಸದ್ಯ, ಸ್ಕ್ಯಾಮರ್‌ನೊಂದಿಗಿನ ನಡೆಸಿದ ಸಂಭಾಷಣೆಯ ಸ್ನ್ಯಾಪ್‌ಶಾಟ್‌ಗಳ ಫೋಟೋಗಳು ಇಂಟರ್ನೆಟ್ ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ.