alex Certify ʼಕೊರೊನಾʼದಿಂದಾಗಿ ಚಿತ್ರರಂಗದಲ್ಲಾದ ಬದಲಾವಣೆಯನ್ನು ಬಿಚ್ಚಿಟ್ಟ ಮನೋಜ್‌ ಬಾಜಪೇಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼದಿಂದಾಗಿ ಚಿತ್ರರಂಗದಲ್ಲಾದ ಬದಲಾವಣೆಯನ್ನು ಬಿಚ್ಚಿಟ್ಟ ಮನೋಜ್‌ ಬಾಜಪೇಯಿ

ಕಳೆದ ಎರಡು ವರ್ಷಗಳಲ್ಲಿ ದೇಶದಲ್ಲಿ ಕೊರೊನಾ ಸಾಂಕ್ರಾಮಿಕವು ನೂರಾರು ಬದಲಾವಣೆಗೆ ಕಾರಣವಾಗಿದ್ದು, ಇದರಿಂದ ಸಿನಿಮಾ, ವೆಬ್‌ಸಿರೀಸ್‌ ಕ್ಷೇತ್ರವೂ ಹೊರತಾಗಿಲ್ಲ. ಅದರಲ್ಲೂ, ಲಾಕ್‌ಡೌನ್‌, ನಿರ್ಬಂಧಗಳ ಹಿನ್ನೆಲೆಯಲ್ಲಿ ಒಟಿಟಿ ಪ್ಲಾರ್ಟ್‌ಫಾಮ್‌ ಮುನ್ನೆಲೆಗೆ ಬಂದಿದೆ. ಇದರಿಂದಾಗಿ ಪೋಷಕ ಪಾತ್ರದಲ್ಲಿ ನಟಿಸುತ್ತಿದ್ದ ನಟರೇ ಹೀರೊಗಳಾಗಿ ಮಾರ್ಪಾಡಾಗಿದ್ದಾರೆ. ದೇಶಾದ್ಯಂತ ಜನ ಅವರನ್ನು ಗುರುತಿಸುವಂತಾಗಿದೆ.

ಹೀಗೆ, ಬಾಲಿವುಡ್‌ನ ಪೋಷಕ ನಟರಾಗಿದ್ದ ಮನೋಜ್‌ ಬಾಜಪೇಯಿ ಅವರು ’ಫ್ಯಾಮಿಲಿ ಮ್ಯಾನ್‌’ ವೆಬ್‌ ಸಿರೀಸ್‌ನಿಂದಾಗಿ ದೇಶಾದ್ಯಂತ ಜನಮನ ಸೆಳೆದಿದ್ದು, ಅವರು ಹೇಗೆ ಕೊರೊನಾದಿಂದ ಬಾಲಿವುಡ್‌ನಲ್ಲಿ ಹೀರೊಗಿರಿ ಬದಲಾಗಿದೆ ಎಂಬ ಕುರಿತು ಮಾತನಾಡಿದ್ದಾರೆ. ’ಮೊದಲೆಲ್ಲ ಬಾಲಿವುಡ್‌ನಲ್ಲಿ ಹೀರೊ ಪಾತ್ರದ ಹೊರತಾಗಿ ನಟಿಸುವವರನ್ನು ಸೆಟ್‌ನಲ್ಲಾಗಲಿ, ಪೋಸ್ಟರ್‌ಗಳಲ್ಲಾಗಲಿ ಎರಡನೇ ದರ್ಜೆಯ ನಾಗರಿಕರು ಎಂಬಂತೆ ಕಾಣಲಾಗುತ್ತಿತ್ತು. ಜನರು ಸಹ ಅವರನ್ನು ಹಾಗೆಯೇ ಕಾಣುತ್ತಿದ್ದರು. ಆದರೆ, ಕೊರೊನಾ ಬಿಕ್ಕಟ್ಟಿನಿಂದಾಗಿ ಎಲ್ಲವೂ ಬದಲಾಗಿದೆ. ಹೀರೊಗಳನ್ನು ಹೊರತಾಗಿಯೂ ಬೇರೆ ಕಲಾವಿದರನ್ನು ಜನ ಗುರುತಿಸುವಂತಾಗಿದೆ’ ಎಂದಿದ್ದಾರೆ.

’ಸಿನಿಮಾ ಮಾಡುವ ವಿಧಾನವೇ ಈಗ ಬದಲಾಗಿದೆ. ಪೋಷಕ ಪಾತ್ರದಲ್ಲಿ ನಟಿಸುವವರು ಸಹ ಈಗ ಮುನ್ನೆಲೆಗೆ ಬಂದಿದ್ದಾರೆ. ಮಹಿಳಾ ಪ್ರಾಧಾನ್ಯತೆಯ ಸಿನಿಮಾಗಳು ಬರುತ್ತಿವೆ. ಪ್ರತಿಭಾವಂತ ಹಿರಿಯ ನಟರು ಸಹ ಈಗ ಜನರ ಕಣ್ಣಿನಲ್ಲಿ ಹೀರೊಗಳಾಗಿದ್ದಾರೆ. ಒಟಿಟಿ ವೇದಿಕೆಯೂ ಇದಕ್ಕೆ ನೆರವಾಗಿದೆ’ ಎಂದು ಹೇಳಿದ್ದಾರೆ.

ಅನಾಯಾಸವಾಗಿ ಸಿಕ್ಕ 20 ಸಾವಿರ ರೂ. ಮರಳಿಸಿ ಪ್ರಾಮಾಣಿಕತೆ ಮೆರೆದ ವಿಮಾನ ನಿಲ್ದಾಣ ಸಿಬ್ಬಂದಿ

ಫ್ಯಾಮಿಲಿ ಮ್ಯಾನ್‌ 1 ಹಾಗೂ ಫ್ಯಾಮಿಲಿ ಮ್ಯಾನ್‌ 2 ಮನೋಜ್‌ ಬಾಜಪೇಯಿ ಅವರ ಪ್ರಮುಖ ವೆಬ್‌ ಸಿರೀಸ್‌ಗಳಾಗಿದ್ದು, ಇವುಗಳಿಂದಲೇ ಜನ ಅವರನ್ನು ಗುರುತಿಸುತ್ತಿದ್ದಾರೆ. ಇದಕ್ಕೂ ಮೊದಲು ಬಾಲಿವುಡ್‌ನ ಹಲವು ಚಿತ್ರಗಳಲ್ಲಿ ಅವರು ನಟಿಸಿದ್ದರು. ಆದರೆ, ಈ ವೆಬ್‌ ಸಿರೀಸ್‌ಗಳಿಂದಾಗಿ ಅವರು ಸ್ಟಾರ್‌ ನಟರಾಗಿದ್ದಲ್ಲದೆ, ಮನೋಜ್ಞ ನಟನೆಗಾಗಿ ನ್ಯಾಷನಲ್‌ ಅವಾರ್ಡ್‌ ಸಹ ಅವರನ್ನು ಹುಡುಕಿಕೊಂಡು ಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...