alex Certify BREAKING: ‘ಮನ್ ಕಿ ಬಾತ್’ನಲ್ಲಿ ಮೋದಿ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ‘ಮನ್ ಕಿ ಬಾತ್’ನಲ್ಲಿ ಮೋದಿ ಮಹತ್ವದ ಮಾಹಿತಿ

ನವದೆಹಲಿ: ಶತಮಾನದಲ್ಲಿ ಇಂತಹ ಸೋಂಕು ಕಂಡಿರಲಿಲ್ಲ. ಇದನ್ನು ನಿರ್ವಹಿಸುವುದು ಹೇಗೆ ಎಂಬ ಅನುಭವ ಕೂಡ ಇರಲಿಲ್ಲ. ಆದರೆ ಸೇವಾಮನೋಭಾವ ಸಂಕಲ್ಪದಿಂದ ಎದುರಿಸಿದ್ದೇವೆ. ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

‘ಮನ್ ಕಿ ಬಾತ್’ನಲ್ಲಿ ಮಾತನಾಡಿದ ಅವರು, ಕೊರೋನಾ ವಿರುದ್ಧ ಇಡೀ ದೇಶವೇ ಹೋರಾಟ ನಡೆಸುತ್ತಿದೆ. 100 ವರ್ಷಗಳಲ್ಲಿ ಇದು ಅತಿದೊಡ್ಡ ಸಾಂಕ್ರಮಿಕ ರೋಗವಾಗಿದೆ. ಕೊರೋನಾ ಜೊತೆಗೆ ನೈಸರ್ಗಿಕ ವಿಕೋಪ ಎದುರಿಸುವಂತಾಗಿದೆ. ಕಳೆದ 10 ದಿನಗಳ ಅಂತರದಲ್ಲಿ ಎರಡು ಚಂಡಮಾರುತ ಎದುರಿಸಿದ್ದೇವೆ ತೌಕ್ತೆ ಮತ್ತು ಯಾಸ್ ಚಂಡಮಾರುತದಿಂದಾಗಿ ಅಪಾರ ಹಾನಿಯಾಗಿದೆ. ಹಲವು ರಾಜ್ಯಗಳಲ್ಲಿ ಚಂಡಮಾರುತ ಪರಿಣಾಮ ಬೀರಿದೆ. ಸಂಕಷ್ಟದಲ್ಲಿ ಕೇಂದ್ರ ಮತ್ತು ರಾಜ್ಯಗಳ ಒಟ್ಟಾಗಿ ಕೆಲಸ ಮಾಡಿವೆ. ಸಂಕಷ್ಟದಲ್ಲಿ ಸಿಲುಕಿದವರಿಗೆ ನಾವು ಬೆಂಬಲವಾಗಿ ನಿಲ್ಲೋಣ ಎಂದು ಹೇಳಿದ್ದಾರೆ.

ಕೊರೋನಾ ಎರಡನೇ ಅಲೆ ಆರಂಭದಲ್ಲಿ ಆಮ್ಲಜನಕದ ಬೇಡಿಕೆ ಹೆಚ್ಚಾಗಿದ್ದು, ವೈದ್ಯಕೀಯ ಆಮ್ಲಜನಕ ಬೇಡಿಕೆ ಇದ್ದಕ್ಕಿದ್ದಂತೆ ಜಾಸ್ತಿಯಾಗಿತ್ತು. ದಿನದಲ್ಲಿ 900 ಮೆಟ್ರಿಕ್ ಟನ್ ಲಿಕ್ವಿದ್ ಆಕ್ಸಿಜನ್ ಉತ್ಪಾದನೆಯಾಗುತ್ತಿದ್ದು, ಈಗ 10 -15 ಪಟ್ಟು ಜಾಸ್ತಿಯಾಗಿದೆ. ಅಗತ್ಯವಾದ ಆಮ್ಲಜನಕ ಉತ್ಪಾದನೆಯಾಗುತ್ತಿದೆ. ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...