alex Certify BIG BREAKING NEWS: ಅಧಿಕಾರದಲ್ಲಿರಲು ಬಯಸಲ್ಲ; ‘ಮನ್ ಕಿ ಬಾತ್’ನಲ್ಲಿ ಮೋದಿ ಮಹತ್ವದ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING NEWS: ಅಧಿಕಾರದಲ್ಲಿರಲು ಬಯಸಲ್ಲ; ‘ಮನ್ ಕಿ ಬಾತ್’ನಲ್ಲಿ ಮೋದಿ ಮಹತ್ವದ ಹೇಳಿಕೆ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ 83ನೇ ಸಂಚಿಕೆಯಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ್ದಾರೆ.

ಇನ್ನೆರಡು ದಿನಗಳಲ್ಲಿ ಡಿಸೆಂಬರ್ ಆರಂಭವಾಗಲಿದ್ದು, ದೇಶ ನೌಕಾಪಡೆಯ ದಿನ ಮತ್ತು ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಆಚರಿಸುತ್ತಿದೆ. ಡಿಸೆಂಬರ್ 16 ರಂದು ದೇಶವು 1971 ರ ಯುದ್ಧದ ಸುವರ್ಣಮಹೋತ್ಸವ ಆಚರಿಸಲಿದ್ದು, ಈ ಸಂದರ್ಭದಲ್ಲಿ ದೇಶದ ಭದ್ರತಾ ಪಡೆಗಳನ್ನು ಸ್ಮರಿಸುವುದು ನಮ್ಮ ಕರ್ತವ್ಯ. ನಾವು ವೀರಯೋಧರನ್ನು ಹುತಾತ್ಮ ಯೋಧರನ್ನು ಸ್ಮರಿಸೋಣ ಎಂದು ಹೇಳಿದ್ದಾರೆ.

ಪ್ರಕೃತಿ ಸಂರಕ್ಷಣೆ ಮಹತ್ವ ಕುರಿತು ಮಾತನಾಡಿದ ಮೋದಿ, ನಾವು ಪ್ರಕೃತಿಯನ್ನು ಸಂರಕ್ಷಿಸಿದಾಗ ಅದು ಪ್ರತಿಯಾಗಿ ನಮಗೆ ಪೋಷಣೆ ಮತ್ತು ರಕ್ಷಣೆ ನೀಡುತ್ತದೆ ಎಂದು ಹೇಳಿದ್ದಾರೆ.

‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಉದಾಹರಣೆ ನೀಡಿದ ಪ್ರಧಾನಿ ಮೋದಿ, ಜಲೌನ್‌ನಲ್ಲಿ ನೂನ್ ನದಿ ಎಂಬ ನದಿ ಇತ್ತು. ಕ್ರಮೇಣ, ನದಿಯು ಅಳಿವಿನ ಅಂಚಿಗೆ ಬಂದಿತು. ಇದರಿಂದ ಈ ಭಾಗದ ರೈತರಿಗೆ ಸಂಕಷ್ಟ ಎದುರಾಗಿದೆ. ಜಲೌನ್‌ ಜನರು ಈ ವರ್ಷ ಸಮಿತಿಯನ್ನು ರಚಿಸಿ ನದಿಯನ್ನು ಪುನರುಜ್ಜೀವನಗೊಳಿಸಿದರು. ಇದು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಉದಾಹರಣೆಯಾಗಿದೆ ಎಂದರು.

ಸರ್ಕಾರದ ಪ್ರಯತ್ನದಿಂದ, ಸರ್ಕಾರದ ಯೋಜನೆಗಳಿಂದ ಅನೇಕ ಬದಲಾವಣೆ ಆಗಿದೆ. ನಾನು ಅಧಿಕಾರದಲ್ಲಿರಲು ಬಯಸುವುದಿಲ್ಲ, ಜನರ ಸೇವೆಯೇ ನನ್ನ ಗುರಿ ಎಂದು ಹೇಳಿದ್ದಾರೆ.

ಸರ್ಕಾರದ ಪ್ರಯತ್ನದಿಂದ, ಸರ್ಕಾರದ ಯೋಜನೆಗಳಿಂದ ಯಾವುದೇ ಜೀವನ ಹೇಗೆ ಬದಲಾಯಿತು, ಆ ಬದಲಾದ ಜೀವನದ ಅನುಭವವೇನು? ಇದನ್ನು ಕೇಳಿದಾಗ ನಮಗೂ ಸಂಚಲನ ಮೂಡುತ್ತದೆ. ಇದು ಮನಸ್ಸಿಗೆ ತೃಪ್ತಿಯನ್ನು ನೀಡುತ್ತದೆ ಮತ್ತು ಆ ಯೋಜನೆಯನ್ನು ಜನರ ಬಳಿಗೆ ಕೊಂಡೊಯ್ಯಲು ಸ್ಫೂರ್ತಿ ನೀಡುತ್ತದೆ. ಇದನ್ನೇ ನಾನು ಜೀವನದಿಂದ ಹುಡುಕುತ್ತೇನೆ. ಅಧಿಕಾರದಲ್ಲಿರಲು ಬಯಸುವುದಿಲ್ಲ, ಜನರ ಸೇವೆಯೇ ನನ್ನ ಗುರಿ ಎಂದು ಅವರು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...