
ಇಂಫಾಲ್: ಕಾನ್ಸ್ ಟೇಬಲ್ ಓರ್ವ ಇನ್ಸ್ ಪೆಕ್ಟರ್ ಶ್ರೇಣಿಯ ಪೊಲೀಸ್ ಅಧಿಕಾರಿಯನ್ನೇ ಗುಂಡಿಟ್ಟು ಹತ್ಯೆಗೈದಿರುವ ಘಟನೆ ಮಣಿಪುರದಲ್ಲಿ ನಡೆದಿದೆ.
ಇಲ್ಲಿನ ಮೊಂಗ್ ಬಂಗ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಾನ್ಸ್ ಟೆಬಲ್ ಬಿಕ್ರಮ್ ಜಿತ್ ಸಿಂಗ್ ಸಬ್ ಇನ್ಸ ಪೆಕ್ಟರ್ ಅವರನ್ನೇ ಕೊಂದ ಪೇದೆ. ಬಿಕ್ರಮ್ ಜಿತ್ ಸಿಂಗ್ ಹಾಗೂ ಇನ್ಸ್ ಪೆಕ್ಟರ್ ಷಹಜಹಾನ್ ನಡುವೆ ವಾಗ್ವಾದ ನಡೆದಿತ್ತು. ಕೋಪದ ಬರದಲ್ಲಿ ಬಿಕ್ರಮ್ ಜಿತ್ ಸಿಂಗ್ ಷಹಜಹಾನ್ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಗುಂಡೇಟಿನಿಂದ ಷಹಜಹಾನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತಕ್ಷಣ ಕಾನ್ಸ್ ಟೇಬಲ್ ಬಿಕ್ರಮ್ ಜಿತ್ ಸಿಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.