alex Certify Manipur Video: ದೂರು ನೀಡಿದರೂ ʼಎಫ್‌ಐಆರ್‌ʼ ದಾಖಲಿಸದಿರುವ ಶಾಕಿಂಗ್‌ ಸಂಗತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Manipur Video: ದೂರು ನೀಡಿದರೂ ʼಎಫ್‌ಐಆರ್‌ʼ ದಾಖಲಿಸದಿರುವ ಶಾಕಿಂಗ್‌ ಸಂಗತಿ ಬಹಿರಂಗ

ಮೀಸಲಾತಿ ವಿಚಾರಕ್ಕೆ ಭಾರೀ ಹಿಂಸಾಚಾರ ಎದುರಿಸುತ್ತಿರುವ ಮಣಿಪುರದಲ್ಲಿ ನಡೆದ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಈ ಬಗ್ಗೆ ಪ್ರಧಾನಿ ಮೋದಿ ಸೇರಿದಂತೆ, ರಾಜಕೀಯ ನಾಯಕರು ಮತ್ತು ಸೆಲಬ್ರಿಟಿಗಳು ಪ್ರತಿಕ್ರಿಯಿಸಿದ್ದು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈಗಾಗ್ಲೇ ಪ್ರಕರಣ ಸಂಬಂಧ ಓರ್ವ ಆರೋಪಿಯನ್ನ ಬಂಧಿಸಿದ್ದು, ಆರೋಪಿಯನ್ನು ಖುರೀಮ್ ಹೀರೋ ದಾಸ್ ಎಂದು ಗುರುತಿಸಲಾಗಿದೆ.

ಮಹಿಳೆಯರನ್ನ ನಗ್ನಗೊಳಿಸಿ ಮೆರವಣಿಗೆ ಮಾಡುತ್ತಿರುವ ಆಘಾತಕಾರಿ ವಿಡಿಯೋ ವೈರಲ್ ಆದ ಬೆನ್ನಲ್ಲೇ ಈ ವಿಡಿಯೋದ ಸತ್ಯಾಸತ್ಯತೆ ಮತ್ತು ಅಸಲಿಯತ್ತು ತಿಳಿಯಲು ಮುಂದಾದ ನ್ಯೂಸ್ 18ಗೆ ಘಟನೆಯ ಬಗ್ಗೆ ಕಂಪ್ಲೆಂಟ್ ಪ್ರತಿ ಲಭ್ಯವಾಗಿದೆ. ಆದರೆ ನ್ಯೂಸ್ 18 ಪ್ರಕಾರ ದೂರು ನೀಡಿದ್ರೂ ಈ ಬಗ್ಗೆ ಇದುವರೆಗೂ ಎಫ್ಐಆರ್ ದಾಖಲಾಗಿಲ್ಲ.

ಮೇ 4 ರಂದು ಮಧ್ಯಾಹ್ನ 3 ಗಂಟೆಗೆ ನಡೆದ ಘಟನೆಯ ಬಗ್ಗೆ ಗ್ರಾಮಸ್ಥರು ನೀಡಿದ ದೂರಿನಲ್ಲಿ, ಅಂದು ಸುಮಾರು 800-1000 ಜನರು AK ರೈಫಲ್ಸ್, SLR, INSAS ಮತ್ತು 303 ರಿಲ್ಫ್ ನಂತಹ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊತ್ತು ಕಾಂಗ್‌ಪೋಕ್ಪಿ ಜಿಲ್ಲೆಯ ನಮ್ಮ ಗ್ರಾಮವಾದ ಫೈನೋಮ್ ಗೆ ಬಲವಂತವಾಗಿ ನುಗ್ಗಿದರು.

ಈ ವೇಳೆ ಹಿಂಸಾತ್ಮಕ ಗುಂಪು ಎಲ್ಲಾ ಮನೆಗಳನ್ನು ಧ್ವಂಸಗೊಳಿಸಿತು. ಪೀಠೋಪಕರಣಗಳು, ಎಲೆಕ್ಟ್ರಾನಿಕ್ ವಸ್ತುಗಳು, ಪಾತ್ರೆಗಳು, ಬಟ್ಟೆಗಳು, ಧಾನ್ಯಗಳು, ಸೇರಿದಂತೆ ಎಲ್ಲಾ ಸಂಪತ್ತು ನಗದು ಲೂಟಿ ಮಾಡಿದ ನಂತರ ಮನೆಗಳನ್ನು ಸುಟ್ಟು ಹಾಕಿತು. ಇದರಿಂದಾಗಿ ನಾವು ನಿರಾಶ್ರಿತರಾಗಿದ್ದೇವೆ ಎಂದು ಪೊಲೀಸ್ ದೂರಿನಲ್ಲಿ ಹೇಳಲಾಗಿದೆ.

ಈ ಘಟನೆ ವೇಳೆ ಭಯದಿಂದ ಓಡಿಹೋದ ಕೆಲವು ಗ್ರಾಮಸ್ಥರನ್ನು ಪೊಲೀಸರು ರಕ್ಷಿಸಿದರು. ಆದರೆ ನಾಂಗ್ ಪೋಕ್ ಸೆಕ್ಮೈ ಪೊಲೀಸ್ ಠಾಣೆಯಿಂದ ಮೂರು ಕಿಲೋಮೀಟರ್ ದೂರದಲ್ಲಿ ಕೆಲ ಗುಂಪುಗಳು ಜನರನ್ನು ತಡೆದು ಪೊಲೀಸರಿಂದ ಅವರನ್ನು ವಶಕ್ಕೆ ಪಡೆದರು ಎಂಬುದು ದೂರಿನಲ್ಲಿ ಉಲ್ಲೇಖವಾಗಿದೆ.

ಬಲವಂತವಾಗಿ ಮೂವರು ಮಹಿಳೆಯರ ಬಟ್ಟೆ ತೆಗೆಸಲಾಯಿತು. ಜನರ ಗುಂಪಿನ ಮುಂದೆಯೇ ಅವರನ್ನು ವಿವಸ್ತ್ರಗೊಳಿಸಲಾಯಿತು. ನಮ್ಮೆಲ್ಲರ ಮುಂದೆಯೇ ಹಗಲು ಹೊತ್ತಿನಲ್ಲಿ ಕ್ರೂರವಾಗಿ ಅವರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಯಿತು ಎಂದು ದೂರಿನಲ್ಲಿ ಹೇಳಲಾಗಿದೆ.

ಸದ್ಯ ಘಟನೆ ನಡೆದ ಶಂಕಿತ ಪ್ರದೇಶಗಳಲ್ಲಿ ಸಾಮೂಹಿಕ ಕೂಂಬಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಮತ್ತು ವೀಡಿಯೊಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಕಾರ್ಯವನ್ನು ಸೈಬರ್ ಕ್ರೈಮ್ ಘಟಕಕ್ಕೆ ವಹಿಸಲಾಗಿದೆ ಎಂದು ಮಣಿಪುರ ಸಿಎಂ ಎನ್ ಬಿರೇನ್ ಸಿಂಗ್ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...