ವಿಶ್ವದ ದೊಡ್ಡಣ್ಣ ಅಮೆರಿಕದ ವಿಶ್ವ ವಾಣಿಜ್ಯ ಕಟ್ಟಡದ ಮೇಲೆ ದಾಳಿ ನಡೆಸಿ 20 ವರ್ಷಗಳಾಗಿವೆ. ಜಾರ್ಜ್ ಡಬ್ಲ್ಯು ಬುಷ್ ಆಗ ಅಮೆರಿಕದ ಅಧ್ಯಕ್ಷರಾಗಿದ್ದರು.
ಸೆಪ್ಟೆಂಬರ್ 11 ರ ಬೆಳಿಗ್ಗೆ 8.46 ಮತ್ತು 10.28 ರ ನಡುವೆ ಎರಡು ವಿಮಾನಗಳು ವಿಶ್ವ ವ್ಯಾಪಾರ ಕೇಂದ್ರಕ್ಕೆ ಅಪ್ಪಳಿಸಿದ್ದವು. ಮೂರನೇ ವಿಮಾನವು ಪೆಂಟಗನ್ ಗೆ ಅಪ್ಪಳಿಸಿತು. ಈ ಭಯೋತ್ದಾದಕ ದಾಳಿಗೆ ಹಲವು ರಾಷ್ಟ್ರಗಳ ಸುಮಾರು 3000 ಜನರು ಬಲಿಯಾಗಿದ್ದರು. ಈ ದಾಳಿಯಲ್ಲಿ ಮಡಿದವರಲ್ಲಿ ಮಣಿಪುರ ಮೂಲದ ಓರ್ವ ಭಾರತೀಯ ಕೂಡ ಸೇರಿದ್ದಾರೆ.
ಗುರು ಯೆಂಬೆಮ್ ಎಂಬವರು ನ್ಯೂಯಾರ್ಕ್ ನ ವಿಂಡೋಸ್ ನಲ್ಲಿ ವರ್ಲ್ಡ್ ರೆಸ್ಟೋರೆಂಟ್ ನಲ್ಲಿ ಔತಣಕೂಟದ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ಅಲ್ಲಿ ಅವರು ಆ ದಿನದ ಟೆಕ್ ಕಾನ್ಫರೆನ್ಸ್ ನಲ್ಲಿ ಉಪಹಾರ ಸಭೆಯ ಉಸ್ತುವಾರಿ ವಹಿಸಿದ್ದರು. ಭಯೋತ್ಪಾದಕರು ಡಬ್ಲ್ಯೂಟಿಸಿ ಮೇಲೆ ದಾಳಿ ಮಾಡಿದಾಗ ಯೆಂಬೆಮ್ ಅವರು 107ನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದರು.
ಅಮೆರಿಕ ಅಧ್ಯಕ್ಷರ ವಿಮಾನವೂ ಭಯೋತ್ಪಾದಕರ ಹಿಟ್‌ಲಿಸ್ಟ್‌ನಲ್ಲಿತ್ತು…..!
ಭಯೋತ್ಪಾದಕರ ದಾಳಿ ಟಿವಿಯಲ್ಲಿ ಬಿತ್ತರವಾಗುತ್ತಿದ್ದಂತೆ ಯೆಂಬೆಮ್ ಅವರ ಸಹೋದರ ಲಾಬಾ ಅವರಿಗೆ ಫೋನ್ ಮಾಡಿದ್ದರಂತೆ. ಆದರೆ ಯಾರೂ ಕೂಡ ಫೋನಿಗೆ ಉತ್ತರಿಸಿರಲಿಲ್ಲ ಎಂದು ಹೇಳಿದ್ದಾರೆ. ಯೆಂಬೆಮ್ ಬದುಕುಳಿದಿರಬಹುದು ಎಂದೇ ಕುಟುಂಬ ಆಶಿಸಿತ್ತು. ಆದರೆ, 4ನೇ ದಿನ ಆತನ ಶವ ಪತ್ತೆಯಾಗಿದೆ. ಪ್ರತಿವರ್ಷ ಯೆಂಬೆಮ್ ಕುಟುಂಬ ಅವರ ಪುಣ್ಯತಿಥಿಯನ್ನು ಆಚರಿಸಿ, ನೆನಪಿಸಿಕೊಳ್ಳುತ್ತಾರೆ.