ಕರ್ನಾಟಕದ ಪ್ರತಿಷ್ಠಿತ ಆಸ್ಪತ್ರೆ ಮಣಿಪಾಲ್ ಮಹಿಳೆಯರಿಗಾಗಿ ಹೊಸದಾಗಿ ವಿಡಿಯೋ ಟೆಲಿ ಕನ್ಸಲ್ಟೇಷನ್ ಸೌಲಭ್ಯ ಒದಗಿಸುತ್ತಿದೆ. ವಿಶೇಷ ಎಂದರೆ ಈ ಸೌಲಭ್ಯ ಕೇವಲ ಮಹಿಳೆಯರಿಗಾಗಿ ಇದ್ದು, ಮಹಿಳಾ ತಜ್ಞರು ಸೇರಿದಂತೆ ಈ ಟೀಮ್ ನ ಪ್ರತಿಯೊಬ್ಬರು ಸದಸ್ಯರು ಮಹಿಳೆಯರಾಗಿರುತ್ತಾರೆ.
ಹಲವು ಪ್ರಕರಣಗಳಲ್ಲಿ, ದೈಹಿಕ ತೊಂದರೆಯಾಗಲಿ, ಮಾನಸಿಕ ತೊಂದರೆಯಾಗಲಿ ಮಹಿಳೆಯರು ತಮ್ಮ ಆರೋಗ್ಯ ಸಮಸ್ಯೆಗಳನ್ನು ತಮ್ಮ ಸ್ನೇಹಿತರೊಂದಿಗಾಗಲಿ, ಪ್ರೀತಿ ಪಾತ್ರರೊಂದಿಗಾಗಲಿ ಹಂಚಿಕೊಳ್ಳುವುದಕ್ಕೆ ಹಿಂಜರಿಯುತ್ತಾರೆ. ಇದು ಮುಂದೆ ಅತಿದೊಡ್ಡ ಸಮಸ್ಯೆಯಾಗಿ ಕಾಡಬಹುದು. ಹೀಗಾಗಿ ಮಹಿಳೆಯರು ತಮ್ಮ ಸಮಸ್ಯೆಗಳನ್ನು, ತಾವು ಎದುರಿಸುತ್ತಿರುವ ನೋವುಗಳನ್ನ ಹೇಳಿಕೊಳ್ಳುವ ಅಥವಾ ಹಂಚಿಕೊಳ್ಳುವ ಅವಶ್ಯಕತೆ ಇದೆ. ಅಂತವರಿಗಾಗಿಯೇ ಈ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಮಣಿಪಾಲ್ ಆಸ್ಪತ್ರೆ ಹೇಳಿಕೆಯಲ್ಲಿ ತಿಳಿಸಿದೆ.
BIG NEWS: ಹಿಜಾಬ್ ವಿವಾದ; ಹೈಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ಆರಂಭ
ಮಣಿಪಾಲ್ ಆಸ್ಪತ್ರೆಯ ಇನಿಷಿಯೇಟಿವ್ ಒಂದರ ಭಾಗವಾಗಿ ಮಹಿಳೆಯರಿಗಾಗಿ ವಿಡಿಯೋ ಟೆಲಿ ಕನ್ಸಲ್ಟೇಷನ್ ಸರ್ವೀಸ್ ನೀಡಲು ತೀರ್ಮಾನಿಸಲಾಗಿದೆ. ಮಹಿಳೆಯರಿಗಾಗಿ ಮಹಿಳೆಯರಿಂದ(For women, by women) ಎಂಬ ಕಾರ್ಯಕ್ರಮವು ಕಂಕುಳಲ್ಲಿ ಗಡ್ಡೆ ಅಥವಾ ಊತದಿಂದ ಅಸ್ವಸ್ಥತೆ, ಮಾನಸಿಕ ಆಯಾಸ, ಸುಸ್ತು, ತೂಕ ನಷ್ಟ, ಮುಟ್ಟಿನ ಸಮಸ್ಯೆ, ತಲೆನೋವು ಮತ್ತು ಮಾನಸಿಕ-ಭಾವನಾತ್ಮಕ ಅಸ್ವಸ್ಥತೆಗಳ ಸೇರಿದಂತೆ ಮಹಿಳೆಯರು ಹಾಗೂ ಹುಡುಗಿಯರು ಎದುರಿಸುತ್ತಿರುವ ಅಥವಾ ಎದುರಿಸುವ ಅನೇಕ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದು ಆಸ್ಪತ್ರೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.