
ಇಂದು ಪುಣೆಯ ಶಿವ್ ಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಕ್ರೀಡಾಂಗಣದಲ್ಲಿ ವಿವೋ ಪ್ರೊ ಕಬಡ್ಡಿಯ 29ನೇ ಪಂದ್ಯ ನಡೆಯಲಿದ್ದು, ಯುಪಿ ಯೋಧಾಸ್ ಹಾಗೂ ಬೆಂಗಾಲ್ ವಾರಿಯರ್ಸ್ ಮುಖಾಮುಖಿಯಾಗಲಿವೆ.
ಮಣಿಂದರ್ ಹಾಗೂ ರೆಕಾರ್ಡ್ ಬ್ರೇಕರ್ ಪರ್ದೀಪ್ ನರ್ವಾಲ್ ಅವರ ರೈಡಿಂಗ್ ಅಬ್ಬರ ನೋಡಲು ಇಂದು ಕಬಡ್ಡಿ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಸೇರಲಿದ್ದಾರೆ.
ಬೆಂಗಾಲ್ ವಾರಿಯರ್ಸ್ ಕಬಡ್ಡಿ ಅಂಕಪಟ್ಟಿಯಲ್ಲಿ ಒಂದನೇ ಸ್ಥಾನದಲ್ಲಿದ್ದರೆ ಯುಪಿ ಯೋಧಾಸ್ ಎಂಟನೇ ಸ್ಥಾನ ಕಾಯ್ದುಕೊಂಡಿದೆ. ಯುಪಿ ಯೋಧಾಸ್ ಪಂದ್ಯವನ್ನು ಗೆದ್ದು ಮೇಲೇರುವ ಉತ್ಸಾಹದಲ್ಲಿದೆ. ಮತ್ತೊಂದು ಪಂದ್ಯದಲ್ಲಿ ಪುಣೆರಿ ಪಲ್ಟಾನ್ ಹಾಗೂ ದಬಾಂಗ್ ಡೆಲ್ಲಿ ಕಾದಾಟ ನಡೆಸಲಿವೆ.