ಹಣ್ಣುಗಳ ರಾಜ ಮಾವು. ಇದನ್ನು ಇಷ್ಟಪಡದವರಿಲ್ಲ. ರುಚಿಯಲ್ಲಿ ಮೊದಲ ಸ್ಥಾನದಲ್ಲಿರುವ ಮಾವು ತಿನ್ನಲು ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು. ಮಾವಿನ ಹಣ್ಣು ತಿಂದು ಸಿಪ್ಪೆ ಒಗೆಯುವವರು ಸಿಪ್ಪೆಯಲ್ಲಿರುವ ಸೌಂದರ್ಯದ ಗುಟ್ಟು ತಿಳಿದುಕೊಳ್ಳಿ.
ಮಾವಿನ ಹಣ್ಣಿನ ಸಿಪ್ಪೆಯನ್ನು ರುಬ್ಬಿ ಮುಖಕ್ಕೆ ಹಚ್ಚಿಕೊಳ್ಳಿ. ಅದು ಒಣಗಿದ ನಂತ್ರ ತೊಳೆಯಿರಿ. ಇದು ಸುಕ್ಕು ಮತ್ತು ಮೊಡವೆಯನ್ನು ಕಡಿಮೆ ಮಾಡುತ್ತದೆ. ಸಿಪ್ಪೆಯನ್ನು ಕೆಲವು ದಿನಗಳವರೆಗೆ ಬಿಸಿಲಿನಲ್ಲಿ ಒಣಗಿಸಿ. ಅದನ್ನು ನುಣ್ಣಗೆ ರುಬ್ಬಿಕೊಳ್ಳಿ. ಈ ಪುಡಿಗೆ ಮೊಸರು ಅಥವಾ ರೋಸ್ ವಾಟರ್ ಮಿಶ್ರಣ ಮಾಡಿ ಮುಖಕ್ಕೆ ಪ್ರತಿದಿನ ಹಚ್ಚಿ. ಈ ಫೇಸ್ ಪ್ಯಾಕ್ ಚರ್ಮದ ಕಪ್ಪು ಕಲೆಗಳನ್ನು ಕಡಿಮೆ ಮಾಡುತ್ತದೆ.
ಟ್ಯಾನಿಂಗ್ ಚರ್ಮದ ಮೇಲೆ ಮಾವಿನ ಸಿಪ್ಪೆಯನ್ನು ಹಚ್ಚಿ ಮತ್ತು ಕೈಗಳಿಂದ ಮಸಾಜ್ ಮಾಡಿ. ಸ್ವಲ್ಪ ಸಮಯದವರೆಗೆ ಅದನ್ನು ಮುಖಕ್ಕೆ ಹಚ್ಚಿದ ನಂತರ ತೊಳೆಯಿರಿ. ಇದ್ರಿಂದ ಚರ್ಮದ ಹೊಳಪು ಮರಳುತ್ತದೆ.
ಮಾವಿನ ಕಾಯಿಯನ್ನು ನುಣ್ಣಗೆ ಕತ್ತರಿಸಿ ನೀರಿನಲ್ಲಿ ಕುದಿಸಿ. ಆ ನೀರಿನಲ್ಲಿ ದಿನಕ್ಕೆ ಎರಡು ಬಾರಿ ಮುಖವನ್ನು ಸ್ವಚ್ಛಗೊಳಿಸಿ. ಇದ್ರಿಂದ ಮೊಡವೆ ಸಮಸ್ಯೆ ಕಡಿಮೆಯಾಗುತ್ತದೆ.